ADVERTISEMENT

ಅಯೋಧ್ಯೆ | ರಾಮಮಂದಿರ ನಿರ್ಮಾಣ ಅಖಂಡ ಭಾರತದತ್ತ ಒಂದು ಹೆಜ್ಜೆ: ಸಿಎಂ ಯಾದವ್

ಪಿಟಿಐ
Published 20 ಜನವರಿ 2024, 10:02 IST
Last Updated 20 ಜನವರಿ 2024, 10:02 IST
<div class="paragraphs"><p>ಅಯೋಧ್ಯೆ ರಾಮಮಂದಿರ</p></div>

ಅಯೋಧ್ಯೆ ರಾಮಮಂದಿರ

   

ಭೋಪಾಲ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ರಾಮ ಮಂದಿರವು ‘ಅಖಂಡ ಭಾರತದತ್ತ ಒಂದು ಹೆಜ್ಜೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಶನಿವಾರ ಹೇಳಿದ್ದಾರೆ.

ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹನುಮಾನ್‌ ಚಾಲೀಸಾ ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಯಾದವ್, ಭಗವಂತ ಬಯಸಿದರೆ ಅಖಂಡ ಭಾರತವು ಅಫ್ಗಾನಿಸ್ತಾನದವರೆಗೂ ವಿಸ್ತರಿಸಬಹುದು ಎಂದು ಅಭಿಪ್ರಾಯಪಟ್ಟರು.

ADVERTISEMENT

32 ವರ್ಷಗಳ ಬಳಿಕ ದೇವಾಲಯ ನಿರ್ಮಾಣವಾಗುತ್ತಿರುವುದು ದೇಶದ ನಾಗರಿಕರ ಸೌಭಾಗ್ಯ. ರಾಮಮಂದಿರಕ್ಕಾಗಿ ಸುಮಾರು 500 ವರ್ಷಗಳ ಕಾಲ ಹಲವಾರು ತಲೆಮಾರುಗಳು ಹೋರಾಟ ನಡೆಸಿದೆ. ಈ ಹಿಂದೆ ರಾಮಂದಿರ ಶತ್ರುಗಳ ದಾಳಿಗೆ ಒಳಗಾಗಿ ನಾಶವಾಯಿತು. 1947ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ಸಿಖ್‌ರ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ನಂಕಾನ್‌ ಸಾಹಿಬ್‌ ಪಾಕಿಸ್ತಾನದ ಗಡಿಯಲ್ಲಿಯೇ ಉಳಿದುಕೊಂಡಿತು. ಭಗವಂತ ಬಯಸಿದರೆ ಮತ್ತೆ ಅಖಂಡ ಭಾರತ ನಿರ್ಮಾಣವಾಗುತ್ತದೆ ಎಂದು ಯಾದವ್ ತಿಳಿಸಿದ್ದಾರೆ.

ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಈಗಾಗಲೇ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಹಾಗೂ ಎಲ್ಲಾ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.