ADVERTISEMENT

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿಯಿಂದ ₹5,00,100 ದೇಣಿಗೆ

ಏಜೆನ್ಸೀಸ್
Published 15 ಜನವರಿ 2021, 12:24 IST
Last Updated 15 ಜನವರಿ 2021, 12:24 IST
ಅಯೋಧ್ಯೆ ರಾಮಮಂದಿರ ನೀಲ ನಕ್ಷೆ
ಅಯೋಧ್ಯೆ ರಾಮಮಂದಿರ ನೀಲ ನಕ್ಷೆ   

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ಅವರು ₹5,00,100 ದೇಣಿಗೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಎಲ್ಲ ಜಾತಿ, ಧರ್ಮ ಸೇರಿದಂತೆ ಸಮುದಾಯಗಳಿಂದ ಧನ ಸಹಾಯ ಸ್ವೀಕರಿಸಲು ಪ್ರಾರಂಭಿಸಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್‌ನ ಹಿರಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ಅವರು ದೇಶದ ಮೊದಲ ಪ್ರಜೆ. ಹಾಗಾಗಿ ನಾವು ಈ ದೇಣಿಗೆ ಸಂಗ್ರಹ ಅಭಿಯಾನವನ್ನು ಅವರಿಂದಲೇ ಪ್ರಾರಂಭಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದೆವು. ರಾಮನಾಥ್ ಕೋವಿಂದ್ ಕುಟುಂಬವನ್ನು ಭೇಟಿಯಾಗಿದ್ದೇವೆ. ಅವರು ₹5,00,100 ದೇಣಿಗೆ ನೀಡಿ ಶುಭಾಶಯಗಳನ್ನು ಕೋರಿದ್ದಾರೆ ಎಂದು ವಿಎಚ್‌ಪಿ ಮುಖಂಡ ಅಲೋಕ್ ಕುಮಾರ್ ತಿಳಿಸಿದರು.

ADVERTISEMENT

ಮಂದಿರ ನಿರ್ಮಾಣಕ್ಕಾಗಿ ಆರಂಭಿಕ ವೆಚ್ಚ 13 ಕೋಟಿ ರೂ. ಅಂದಾಜಿಸಲಾಗಿದೆ. ಹಾಗಾಗಿ ದೇಣಿಗೆ ಸಂಗ್ರಹಿಸಲು 5,25,000 ಹಳ್ಳಿಗಳಲ್ಲಿ 65,000 ಕುಟುಂಬಗಳನ್ನು ತಲುಪಬೇಕಿದೆ. ಈ ಅಭಿಯಾನವು ದೇಶವನ್ನು ಏಕೀಕರಿಸಲಿದೆ ಎಂದವರು ಅಭಿಪ್ರಾಯಪಟ್ಟರು.

ಏತನ್ಮಧ್ಯೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.