ADVERTISEMENT

ಬಿಜೆಪಿ ಪಟ್ಟು: ಕ್ಷಮೆ ಕೋರಿದ ಆಜಂ

ಸಂಸದೆ ರಮಾದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ

ಪಿಟಿಐ
Published 29 ಜುಲೈ 2019, 20:32 IST
Last Updated 29 ಜುಲೈ 2019, 20:32 IST
ಆಜಂ ಖಾನ್‌ ಲೋಕಸಭೆಯಲ್ಲಿ ಸೋಮವಾರ ಮಾತನಾಡಿದರು
ಆಜಂ ಖಾನ್‌ ಲೋಕಸಭೆಯಲ್ಲಿ ಸೋಮವಾರ ಮಾತನಾಡಿದರು   

ನವದೆಹಲಿ: ಲೋಕಸಭೆಯ ಬಿಜೆಪಿ ಸಂಸದೆ ರಮಾದೇವಿ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದ ಎಸ್‌ಪಿ ಮುಖಂಡ ಆಜಂ ಖಾನ್‌ ಸೋಮವಾರ ಕ್ಷಮೆ ಯಾಚಿಸಿದರು.

ಲೋಕಸಭೆಯಲ್ಲಿ ಖಾನ್‌ ಅವರು ಆಡಿದ್ದ ಮಾತುಗಳಿಗೆ ಬಿಜೆಪಿಯ ಮಹಿಳಾ ಸಂಸದರಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳ ಜನರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಅವರು ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸಂಸದರು ಪಟ್ಟು ಹಿಡಿದಿದ್ದರು. ಎಲ್ಲಾ ಕ್ಷೇತ್ರಗಳಿಂದ ಒತ್ತಡ ಹೆಚ್ಚುತ್ತಿರುವುದನ್ನು ಮನಗಂಡ ಆಜಂ ಖಾನ್‌, ಸೋಮವಾರ ಲೋಕಸಭೆಯಲ್ಲಿ ಎರಡು ಬಾರಿ ಕ್ಷಮೆ ಯಾಚಿಸಿದರು.

ಇದಾದ ಬಳಿಕ ಒಟ್ಟಾರೆ ಘಟನೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ರಮಾದೇವಿ ಅವರು, ‘ಮಹಿಳೆಯರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡುವುದು ಆಜಂ ಖಾನ್‌ ಅವರಿಗೆ ಹವ್ಯಾಸವಾಗಿದೆ. ಸದನದ ಹೊರಗೆ ಅನೇಕ ಬಾರಿ ಅವರು ಇಂಥ ಮಾತುಗಳನ್ನಾಡಿ
ದ್ದಾರೆ. ಈಗ ಸದನದೊಳಗೂ ಆಡಿದ್ದಾರೆ. ಅವರ ಹೇಳಿಕೆಯು ನನಗಷ್ಟೇ ಅಲ್ಲ ಇಡೀ ದೇಶಕ್ಕೆ ನೋವನ್ನು ಉಂಟುಮಾಡಿದೆ. ಇಂಥ ಮಾತುಗಳನ್ನು ಕೇಳಲು ನಾನು ಲೋಕಸಭೆಗೆ ಬಂದಿಲ್ಲ. ಇಂಥ ವರ್ತನೆಯನ್ನು ಅವರು ಬಿಟ್ಟುಬಿಡಬೇಕು’ ಎಂದರು.

ADVERTISEMENT

ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ, ರಮಾದೇವಿ ಅವರ ಕ್ಷಮೆ ಯಾಚಿಸುವಂತೆ ಸ್ಪೀಕರ್‌ ಓಂ ಬಿರ್ಲಾ ಅವರು ಖಾನ್‌ ಅವರಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.