ADVERTISEMENT

ಮುಂದಿನ ಪ್ರಧಾನಿ: ಈಗಲೇ ಹೇಳುವುದು ಕಷ್ಟ –ರಾಮ್‌ದೇವ್

ಪಿಟಿಐ
Published 26 ಡಿಸೆಂಬರ್ 2018, 19:24 IST
Last Updated 26 ಡಿಸೆಂಬರ್ 2018, 19:24 IST

ಮದುರೆ: ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ಮುಂದಿನ ಪ್ರಧಾನಿ ಯಾರಾಗಬಹುದು ಎಂದು ಹೇಳುವುದು ತೀರಾ ಕಷ್ಟಕರ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ’ಮುಂದಿನ ಪ್ರಧಾನಿ ಕುರಿತು ಏನನ್ನೂ ಹೇಳಲಾರೆ.2019ರ ಲೋಕಸಭಾ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ ಹಾಗೂ ವಿರೋಧಿಸುವುದೂ ಇಲ್ಲ. ನಮಗೆ ರಾಜಕೀಯ ಹಾಗೂ ಧಾರ್ಮಿಕ ಕಾರ್ಯಸೂಚಿ ಇಲ್ಲ. ಹಿಂದೂ ಅಥವಾ ಕೋಮುವಾದಿ ಭಾರತಕ್ಕಿಂತ ನಾವು ಭಾರತ ಹಾಗೂ ವಿಶ್ವವನ್ನು ಅಧ್ಯಾತ್ಮಿಕವಾಗಿಸಲು ಬಯಸುತ್ತೇವೆ’ ಎಂದರು.

ಉತ್ತರಪ್ರದೇಶದಲ್ಲಿನ ಗುಂಪು ದಾಳಿ ಕುರಿತು ಬಾಲಿವುಡ್‌ ನಟ ನಾಸಿರುದ್ಧೀನ್‌ ಶಾ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ಅಸಹಿಷ್ಣತೆಯಿಂದ ಭಾರತದ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದರು.ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟದಿದ್ದರೆ ಬಿಜೆಪಿ ಜನರ ವಿಶ್ವಾಸ ಕಳೆದುಕೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.