ADVERTISEMENT

ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 8:00 IST
Last Updated 23 ಸೆಪ್ಟೆಂಬರ್ 2019, 8:00 IST
ಬಿಪಿನ್ ರಾವತ್
ಬಿಪಿನ್ ರಾವತ್   

ಚೆನ್ನೈ:ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ ನಾಶಮಾಡಿದ್ದಉಗ್ರರ ಶಿಬಿರಗಳು ಮತ್ತೆ ಸಕ್ರಿಯವಾಗಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಸೋಮವಾರ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾವತ್, ಸುಮಾರು 500 ಉಗ್ರರು ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದಿದ್ದಾರೆ.

ಬಾಲಾಕೋಟ್‌ನಲ್ಲಿರುವ ಉಗ್ರರ ಶಿಬಿರಗಳು ಮತ್ತೆ ಸಕ್ರಿಯವಾಗಿವೆ. ಅಂದರೆ ಇಲ್ಲಿದ್ದ ಉಗ್ರರ ಕೇಂದ್ರಗಳು ನಶಿಸಿಹೋಗಿದ್ದವು ಎಂದರ್ಥ. ವಾಯುಸೇನೆ ಇಲ್ಲಿ ದಾಳಿ ನಡೆಸಿದ ನಂತರ ಬಾಲಾಕೋಟ್‌ನಲ್ಲಿದ್ದ ಉಗ್ರರು ಬೇರೆಡೆಗೆ ಹೋಗಿದ್ದು, ಇದೀಗ ಮತ್ತೆ ಅಲ್ಲಿಗೆ ವಾಪಸ್ ಆಗಿದ್ದಾರೆ ಎಂದು ರಾವತ್ ಹೇಳಿದ್ದಾರೆ.

ಫೆಬ್ರುವರಿ 26ರಂದು ಭಾರತ ಬಾಲಾಕೋಟ್‌ನಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳ ಶಿಬಿರಗಳ ಮೇಲೆ ದಾಳಿ ನಡೆಸಿ ಪುಲ್ವಾಮ ದಾಳಿಯ ಪ್ರತಿಕಾರ ತೀರಿಸಿತ್ತು

ಕಾಶ್ಮೀರ ಕಣಿವೆಯ ಜನರು ಮತ್ತು ಪಾಕ್ ಉಗ್ರರ ನಡುವಿನ ಸಂಪರ್ಕ ಕಡಿತಗೊಂಡಿದೆ. ಆದರೆ ಅಲ್ಲಿರುವ ಜನರ ನಡುವೆ ಸಂಪರ್ಕಕ್ಕೆ ಧಕ್ಕೆಯಾಗಿಲ್ಲ . ಅದೇ ವೇಳೆ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಲು ಸಹಾಯ ಮಾಡುವುದಕ್ಕಾಗಿ ಪಾಕ್ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದಕ್ಕೆ ಯಾವ ರೀತಿ ಉತ್ತರಿಸಬೇಕು ಎಂಬುದು ನಮಗೆ ತಿಳಿದಿದೆ. ನಾವು ಸದಾ ಜಾಗೃತರಾಗಿರುತ್ತೀವೆಎಂದು ರಾವತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.