ADVERTISEMENT

ವಿಜಯ ದಿವಸ ಆಚರಣೆ: ಬಾಂಗ್ಲಾ ನಿಯೋಗ ಪಾಲ್ಗೊಳ್ಳುವ ಸಾಧ್ಯತೆ

ಪಿಟಿಐ
Published 12 ಡಿಸೆಂಬರ್ 2024, 14:33 IST
Last Updated 12 ಡಿಸೆಂಬರ್ 2024, 14:33 IST
<div class="paragraphs"><p>ವಿಜಯ ದಿವಸ</p></div>

ವಿಜಯ ದಿವಸ

   

ಕೋಲ್ಕತ್ತ: ಡಿಸೆಂಬರ್‌ 16ರಂದು ಕೋಲ್ಕತ್ತದಲ್ಲಿ ನಡೆಯಲಿರುವ ವಿಜಯ ದಿವಸ ಆಚರಣೆಯಲ್ಲಿ ಬಾಂಗ್ಲಾದೇಶದ ನಿಯೋಗ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಸೇನಾ ಮೂಲಗಳು ಗುರುವಾರ ತಿಳಿಸಿವೆ.

ಆಚರಣೆಯಲ್ಲಿ ‘ಮುಕ್ತಿ ಜೋಧರು’ (ಬಾಂಗ್ಲಾ ಸೇನೆ) ಕೂಡ ಭಾಗವಹಿಸಬಹುದು ಎಂದು ರಕ್ಷಣಾ ಮೂಲಗಳು ತಿಳಿಸಿದ್ದು, ನಿಯೋಗದ ಗಾತ್ರ ಹೇಗಿರಲಿದೆ ಎಂಬ ವಿವರವನ್ನು ನೀಡಿಲ್ಲ.

ADVERTISEMENT

‘ಮುಕ್ತಿ ಜೋಧರು’ ಮತ್ತು ಬಾಂಗ್ಲಾದೇಶ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಒಳಗೊಂಡ ಬಾಂಗ್ಲಾದೇಶದ ನಿಯೋಗವು ಭಾರತೀಯ ಸೇನೆ, ಪ್ರತಿ ವರ್ಷ ಕೋಲ್ಕತ್ತದಲ್ಲಿ ಆಚರಿಸುವ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ. 

ಭಾರತವು 1971ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ನಿರ್ಣಾಯಕ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾಯಿತು. ಈ ಐತಿಹಾಸಿಕ ಗೆಲುವಿನ ಸ್ಮರಣೆಗಾಗಿ ಪ್ರತಿವರ್ಷ ಡಿ. 16ರಂದು ವಿಜಯ ದಿವಸ ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.