ADVERTISEMENT

ಮುಂಬೈ: ಕಾನ್‌ಸ್ಟೆಬಲ್‌ ತಳ್ಳಿ ಆಸ್ಪತ್ರೆಯಿಂದ ಬಾಂಗ್ಲಾದೇಶದ ಮಹಿಳೆ ಪರಾರಿ

ಆಗಸ್ಟ್‌ 5ರಂದು ಬಂಧನಕ್ಕೆ ಒಳಗಾಗಿದ್ದ ಮಹಿಳೆ

ಪಿಟಿಐ
Published 16 ಆಗಸ್ಟ್ 2025, 5:26 IST
Last Updated 16 ಆಗಸ್ಟ್ 2025, 5:26 IST
<div class="paragraphs"><p>ಆಸ್ಪತ್ರೆ</p></div>

ಆಸ್ಪತ್ರೆ

   

(ಸಾಂದರ್ಭಿಕ ಚಿತ್ರ)

ಮುಂಬೈ: ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದ, ಬಾಂಗ್ಲಾದೇಶದ ರುಬಿನಾ ಇರ್ಷದ್‌ ಶೇಖ್‌ (21) ಎಂಬಾಕೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ಕರೆತಂದಾಗ ತಪ್ಪಿಸಿಕೊಂಡಿದ್ದಾಳೆ.

ADVERTISEMENT

ಐದು ತಿಂಗಳ ಗರ್ಭಿಣಿಯಾಗಿದ್ದ ರುಬಿನಾ ಆಸ್ಪತ್ರೆಯಲ್ಲಿ ಗುರುವಾರ ಕಾನ್‌ಸ್ಟೆಬಲ್‌ ಅವರನ್ನು ತಳ್ಳಿ ಪರಾರಿಯಾಗಿದ್ದಾಳೆ.

ಆಕೆಯನ್ನು ನವಿ ಮುಂಬೈನಲ್ಲಿ ಆಗಸ್ಟ್‌ 5ರಂದು ಬಂಧಿಸಲಾಗಿತ್ತು. ಆಕೆಯನ್ನು ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಜ್ವರ, ಚರ್ಮ ಕಾಯಿಲೆ ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಆಕೆಯನ್ನು ಜೆಜೆ ಆಸ್ಪತ್ರೆಗೆ ಕರೆತರಲಾಗಿತ್ತು.

ರುಬಿನಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ. ಆಕೆ ವಿರುದ್ಧ ಈಗಾಗಲೇ ಪಾಸ್‌ಪೋರ್ಟ್‌ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.