ADVERTISEMENT

ಜೇನು ದಾಳಿ; 24 ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 12:24 IST
Last Updated 1 ನವೆಂಬರ್ 2019, 12:24 IST
ಜೇನು ದಾಳಿಗೆ ದಿಕ್ಕಾಪಾಲಾಗಿ ಓಡುತ್ತಿರುವ ವಿದ್ಯಾರ್ಥಿಗಳು
ಜೇನು ದಾಳಿಗೆ ದಿಕ್ಕಾಪಾಲಾಗಿ ಓಡುತ್ತಿರುವ ವಿದ್ಯಾರ್ಥಿಗಳು   

ಮಧ್ಯಪ್ರದೇಶ: ಜೇನು ದಾಳಿಗೆ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮಧ್ಯಪ್ರದೇಶ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸೇರಿದ್ದಾಗ ಈ ಘಟನೆ ಸಂಭವಿಸಿದೆ.

ಸಚಿವ ಡಾ.ಗೋವಿಂದಸಿಂಗ್ ಅವರು ಭಾಷಣ ಮಾಡುತ್ತಿದ್ದ ಸಮಯದಲ್ಲಿ ಹೆಜ್ಜೇನು ಭಾರಿ ಪ್ರಮಾಣದಲ್ಲಿ ಬಂದು ವಿದ್ಯಾರ್ಥಿಗಳ ಮೇಲೆರಗಿದವು. ಈ ಸಮಯದಲ್ಲಿ ಕಿರುಚಾಡಿ, ಕೂಗಾಡುತ್ತಾ ವಿದ್ಯಾರ್ಥಿಗಳೆಲ್ಲಾ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಸುಮಾರು 20ರಿಂದ 24 ಮಂದಿ ವಿದ್ಯಾರ್ಥಿಗಳಿಗೆ ತೀವ್ರಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.

ಈ ಘಟನೆ ಸಂಭವಿಸಿ ವಿದ್ಯಾರ್ಥಿಗಳು ನರಳಾಡುತ್ತಿದ್ದರೂ ಸಚಿವರಾಗಲೀ ಅಥವಾ ವೇದಿಕೆಯ ಮೇಲೆ ಇದ್ದ ಗಣ್ಯರಾಗಲಿ, ಸಂಯೋಜಕರಾಗಲಿ ವಿದ್ಯಾರ್ಥಿಗಳ ಸಹಾಯಕ್ಕೆ ಬರದೆ ಅಲ್ಲಿಯೇ ಕುಳಿತಿದ್ದರು ಎನ್ನಲಾಗಿದೆ. ತಡವಾಗಿ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.