ADVERTISEMENT

ಮಸೂದ್‌ ಅಜರ್‌ ಉಗ್ರ ಪಟ್ಟಿಗೆ: ಶೀಘ್ರದಲ್ಲೇ ಗೊಂದಲ ನಿವಾರಣೆ–ಚೀನಾ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 9:54 IST
Last Updated 17 ಮಾರ್ಚ್ 2019, 9:54 IST
ಚೀನಾದ ರಾಯಭಾರಿ ಲುವೊ ಝಾಹೋಯಿ
ಚೀನಾದ ರಾಯಭಾರಿ ಲುವೊ ಝಾಹೋಯಿ   

ನವದೆಹಲಿ: ಜೈಷೆ–ಎ– ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಚೀನಾ ಅಡ್ಡಗಾಲು ಹಾಕುತ್ತಿರುವುದಕ್ಕೆ ಸಂಬಂಧಿಸಿದಂತೆ ಈ ಗೊಂದಲ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಚೀನಾ ಭಾನುವಾರ ಹೇಳಿದೆ.

ಭಾರತದಲ್ಲಿರುವ ಚೀನಾದ ರಾಯಭಾರಿ ಲುವೊಝಾಹೋಯಿ ಅವರು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಹೋಳಿ ಹಬ್ಬದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಕುರಿತು ಎದ್ದಿರುವ ಗೊಂದಲ ಶೀಘ್ರದಲ್ಲೇ ಬಗೆಹರಿಯಲಿದೆ,ತಾಂತ್ರಿಕ ಕಾರಣಕ್ಕೆ ತಡೆ ನೀಡಲಾಗಿದೆ. ಈ ವಿಷಯದ ಬಗ್ಗೆ ವಿಸ್ತೃತಚರ್ಚೆಗೆ ಇನ್ನೂ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕಳದ ನಾಲ್ಕು ದಿನಗಳ ಹಿಂದೆಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವುದಕ್ಕೆ ಚೀನಾ ವಿಶ್ವಸಂಸ್ಥೆಯಲ್ಲಿ ತಡೆವೊಡ್ಡಿತ್ತು.ಮಸೂದ್‌ ಅಜರ್‌ ನೇತೃತ್ವದ ಜೈಷೆ–ಎ– ಮೊಹಮ್ಮದ್‌ ಉಗ್ರ ಸಂಘಟನೆ ಪುಲ್ವಾಮಾದಲ್ಲಿ ಆತ್ಮಹತ್ಯೆ ಬಾಂಬ್ ದಾಳಿ ನಡೆಸಿ 40 ಯೋಧರನ್ನು ಹತ್ಯೆ ಮಾಡಿತ್ತು. ಈ ಹಿನ್ನೆಯಲ್ಲಿ ಭಾರತ, ಜೈಷೆ–ಎ– ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಜಾಗತಿಕವಾಗಿನಿಷೇಧಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಬಲವಾದ ವಾದ ಮಂಡಿಸಿತ್ತು.

ಈಗಾಗಲೇ ಭಾರತದ ನಡೆಗೆ ಅಮೆರಿಕ, ಫ್ರಾನ್ಸ್‌, ಜರ್ಮನಿ ಮತ್ತು ಬ್ರಿಟನ್‌ ದೇಶಗಳು ಬೆಂಬಲ ಸೂಚಿಸಿದ್ದು ಚೀನಾ ಮಾತ್ರ ಅಡ್ಡಗಾಲು ಹಾಕುತ್ತಿದೆ. ವಿಶ್ವಸಂಸ್ಥೆಯಲ್ಲಿ ಚೀನಾ ನಾಲ್ಕನೇ ಬಾರಿ ಉಗ್ರಮಸೂದ್‌ ಅಜರ್‌ನನ್ನು ಉಗ್ರ ಪಟ್ಟಿಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.