ADVERTISEMENT

ಬೆಂಗಳೂರು–ಕೊಚ್ಚಿ ವಂದೇ ಭಾರತ್‌: ವೇಳಾಪಟ್ಟಿ ಪ್ರಕಟ

ಪಿಟಿಐ
Published 1 ನವೆಂಬರ್ 2025, 14:36 IST
Last Updated 1 ನವೆಂಬರ್ 2025, 14:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ: ಬೆಂಗಳೂರು–ಕೊಚ್ಚಿ ನಡುವೆ ಸಂಚರಿಸಲಿರುವ ನೂತನ ವಂದೇ ಭಾರ‌ತ್‌ ಎಕ್ಸ್‌ಪ್ರೆಸ್‌ನ ಸಂಚಾರ ವೇಳಾಪಟ್ಟಿ ಬಿಡುಗಡೆಯಾಗಿದೆ.

‘ಕೆಎಸ್‌ಆರ್‌ ಬೆಂಗಳೂರು–ಎರ್ನಾಕುಲಂ ಜಂಕ್ಷನ್‌ ವಂದೇಭಾರತ್‌ ರೈಲು(26651) ಬೆಳಿಗ್ಗೆ 5.10ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.50ಕ್ಕೆ ಎರ್ನಾಕುಲಂ ತಲುಪಲಿದೆ. ಎರ್ನಾಕುಲಂ ಜಂಕ್ಷನ್‌ ‌– ಕೆಎಸ್‌ಆರ್‌ ಬೆಂಗಳೂರು ರೈಲು(26652) ಮಧ್ಯಾಹ್ನ 2.20ಕ್ಕೆ ಎರ್ನಾಕುಲಂನಿಂದ ಹೊರಟು ರಾತ್ರಿ 11ಕ್ಕೆ ಬೆಂಗಳೂರು ತಲುಪಲಿದೆ’ ಎಂದು ರೈಲ್ವೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕೃಷ್ಣರಾಜಪುರ, ಸೇಲಂ, ಈರೋಡ್‌, ತಿರುಪ್ಪುರ, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶ್ಯೂರ್‌ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.

ADVERTISEMENT

ನೂತನ ವಂದೇ ಭಾರತ್‌ ರೈಲು ಸೇವೆಯನ್ನು ಶೀಘ್ರದಲ್ಲಿ ಆರಂಭಿಸುವಂತೆ ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆಗೆ ವಿಭಾಗಗಳಿಗೆ ಸಚಿವಾಲಯ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.