ADVERTISEMENT

ಭಿನ್ನಾಭಿಪ್ರಾಯ ಸಹಜ: ಗೆಹಲೋತ್‌–ಪೈಲಟ್‌ ಗುದ್ದಾಟದ ಬಗ್ಗೆ ರಾಹುಲ್‌ ಪ್ರತಿಕ್ರಿಯೆ

ನಮ್ಮದು ಫ್ಯಾಸಿಷ್ಟರ ಪಕ್ಷವಲ್ಲ ಎಂದ ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2022, 4:34 IST
Last Updated 17 ಡಿಸೆಂಬರ್ 2022, 4:34 IST
ರಾಹುಲ್ ಗಾಂಧಿ (ಏಜೆನ್ಸಿ ಚಿತ್ರ)
ರಾಹುಲ್ ಗಾಂಧಿ (ಏಜೆನ್ಸಿ ಚಿತ್ರ)   

ನವದೆಹಲಿ: ‘ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷ ಸರ್ವಾಧಿಕಾರದ ಪಕ್ಷವಲ್ಲ. ನಮ್ಮದು ಫ್ಯಾಸಿಷ್ಟ್ ಪಕ್ಷವಲ್ಲ‘

– ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹಾಗೂ ಸಚಿನ್‌ ಪೈಲಟ್ ನಡುವಣ ತಿಕ್ಕಾಟ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉತ್ತರಿಸಿದ ರೀತಿ ಇದು.

ಅಶೋಕ್‌ ಗೆಹಲೋತ್‌ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಮಾತನಾಡಿದ ರಾಹುಲ್‌ ಗಾಂಧಿ, ‘ನಮ್ಮ ಪಕ್ಷ ಸರ್ವಾಧಿಕಾರದ ಪಕ್ಷವಲ್ಲ. ನಮ್ಮದು ಫ್ಯಾಸಿಷ್ಟ್ ಪಕ್ಷವಲ್ಲ. ಕೆಲವೊಂದು ವಿಚಾರಗಳಲ್ಲಿ ಒಮ್ಮತ ಇದೆ. ಭಿನ್ನಾಭಿಪ್ರಾಯ ಇದ್ದರೆ ಸಮಸ್ಯೆ ಅಲ್ಲ. ರಾಜಸ್ಥಾನದಲ್ಲಿ ಮಾತ್ರ ಈ ಸಮಸ್ಯೆ ಇಲ್ಲ. ಬೇರೆ ರಾಜ್ಯಗಳಲ್ಲೂ ಇದೆ. ಪಕ್ಷದ ಕೇಂದ್ರ ಮಟ್ಟದಲ್ಲೂ ಭಿನ್ನಾಭಿಪ್ರಾಯ ಇದೆ. ಇದು ಕೆಲಸ ಮಾಡುವುದೇ ಹಾಗೆ‘ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ADVERTISEMENT

‘ನಾವು ಇದನ್ನು (ಭಿನ್ನಾಭಿಪ್ರಾಯ) ಸಹಿಸಿಕೊಳ್ಳುತ್ತೇವೆ. ಇದು ದೊಡ್ಡ ಹಾನಿ ಉಂಟು ಮಾಡಬಾರದು. ಹಾಗೆನಾದರೂ ಆದರೆ ನಾವು ಕ್ರಮತೆಗೆದುಕೊಳ್ಳುತ್ತೇವೆ. ಪಕ್ಷದ ಯಾರೇ ಮಾತನಾಡುವುದಿದ್ದರೂ ನಾವು ಅವರನ್ನು ತಡೆಯುವುದಿಲ್ಲ. ನಮ್ಮ ನೀತಿಯೇ ಹಾಗೆ‘ ಎಂದು ರಾಹುಲ್‌ ನುಡಿದಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎನ್ನುವ ಪ್ರಶ್ನೆಗೆ, ‘ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೇಳಿ. ಅವರು ಪಕ್ಷದ ಅಧ್ಯಕ್ಷರು‘ ಎಂದು ರಾಹುಲ್‌ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.