ADVERTISEMENT

ನವಲಖಾ ಅರ್ಜಿ ವಿಚಾರಣೆ: ನ್ಯಾಯಪೀಠದಿಂದ ಹಿಂದೆ ಸರಿದ ನ್ಯಾಯಮೂರ್ತಿ ರವೀಂದ್ರ ಭಟ್

ಪಿಟಿಐ
Published 3 ಅಕ್ಟೋಬರ್ 2019, 10:23 IST
Last Updated 3 ಅಕ್ಟೋಬರ್ 2019, 10:23 IST
ನ್ಯಾಯಮೂರ್ತಿ ಎಸ್. ರವೀಂದ್ರ ಭಟ್
ನ್ಯಾಯಮೂರ್ತಿ ಎಸ್. ರವೀಂದ್ರ ಭಟ್   

ನವದೆಹಲಿ: ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ನಾಗರಿಕ ಹಕ್ಕುಗಳ ಹೋರಾಟಗಾರಗೌತಮ್‌ ನವಲಖಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹಿಂದೆ ಸರಿದಿದ್ದಾರೆ.

ಸೆಪ್ಟೆಂಬರ್ 30ರಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಆಮೇಲೆ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎನ್.ವಿ.ರಮಣ, ಆರ್. ಸುಭಾಷ್ ರೆಡ್ಡಿ ಮತ್ತು ಬಿ.ಆರ್. ಗಾವೈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಗುರುವಾರ ಈ ಅರ್ಜಿ ವಿಚಾರಣೆ ನಡೆಯುವ ಮುನ್ನ ಅರುಣ್ ಮಿಶ್ರಾ, ವಿನೀತ್ ಸರಣ್ ಮತ್ತು ಎಸ್. ರವೀಂದ್ರ ಭಟ್ ನ್ಯಾಯಪೀಠದಲ್ಲಿದ್ದರು. ಆದರೆ ವಿಚಾರಣೆಗೆ ಮುನ್ನ ಭಟ್ ಹಿಂದೆ ಸರಿದಿದ್ದಾರೆ.

ನವಲಖಾ ಅವರಿಗೆ ಬಾಂಬೆ ಹೈಕೋರ್ಟ್‌ ನೀಡಿದ್ದ ಮೂರು ವಾರಗಳ ಭದ್ರತೆ ಅವಧಿ ಶುಕ್ರವಾರ ಅಂತ್ಯಗೊಳ್ಳಲಿದೆ ಎಂದು ನ್ಯಾಯಪೀಠವು ನವಲಖಾ ಅವರ ಸಲಹೆಗಾರರಿಗೆ ಹೇಳಿದ್ದು, ಅರ್ಜಿ ವಿಚಾರಣೆಯನ್ನು ಇನ್ನೊಂದು ನ್ಯಾಯಪೀಠ ಅಕ್ಟೋಬರ್ 4, ಶುಕ್ರವಾರದಂದು ನಡೆಸಲಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.