ADVERTISEMENT

ಭೀಮಾ ಕೋರೆಗಾಂವ್: ಮೂವರ ಬಂಧನಕ್ಕೆ ತಡೆ ವಿಸ್ತರಿಸಿದ ಬಾಂಬೆ ಹೈಕೋರ್ಟ್

ಏಜೆನ್ಸೀಸ್
Published 1 ನವೆಂಬರ್ 2018, 10:24 IST
Last Updated 1 ನವೆಂಬರ್ 2018, 10:24 IST
   

ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಆರೋಪಿಗಳ ಪೈಕಿಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಾಲಖಾ, ನಾಗರಿಕ ಹಕ್ಕುಗಳ ಹೋರಾಟಗಾರ ಆನಂದ್ ತೆಲ್ತುಂಬೆ, ಸಾಮಾಜಿಕ ಕಾರ್ಯಕರ್ತ ಸ್ಟಾನ್ ಸ್ವಾಮಿ ಅವರ ಬಂಧನಕ್ಕೆ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನುಬಾಂಬೆ ಹೈಕೋರ್ಟ್ ನ.21ರವರೆಗೆ ವಿಸ್ತರಿಸಿದೆ.

ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್, ಗೌತಮ್ ನವಾಲಖಾ, ನಿವೃತ್ತ ಪ್ರಾಧ್ಯಾಪಕ ವರ್ನಾನ್ ಗೋನ್ಸಾಲ್ವೆಸ್, ರಾಜಕೀಯ ಚಿಂತಕ ಮತ್ತು ವಕೀಲ ಅರುಣ್ ಫೆರೇರಾ, ಕ್ರಾಂತಿಕಾರಿ ಬರಹಗಾರ ಮತ್ತು ಕವಿ ವರವರರಾವ್ ಅವರನ್ನು ಆಗಸ್ಟ್ 29ರಂದು ಬಂಧಿಸಿ ನಂತರ ಗೃಹ ಬಂಧನದಲ್ಲಿರಿಸಲಾಗಿತ್ತು.

ಜೊತೆಗೆಆನಂದ್ ತೆಲ್ತುಂಬೆ ಹಾಗೂಸ್ಟಾನ್ ಸ್ವಾಮಿ ಅವರ ಮೇಲೆ ದಾಳಿ ನಡೆಸಿದರೂ ಬಂಧನಕ್ಕೊಳಪಡಿಸಿರಲಿಲ್ಲ. ಇನ್ನು ಗೃಹಬಂಧನದಲ್ಲಿರುವ ಐವರ ಪೈಕಿ ಗೌತಮ್‌ ನವಲಖಾ ಅವರನ್ನು ಕಳೆದ ತಿಂಗಳು ದೆಹಲಿ ಹೈಕೋರ್ಟ್ಗೃಹಬಂಧನದಿಂದ ಬಿಡುಗಡೆಗೊಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.