
ಪಿಟಿಐಅಜಿತ್ ಪವಾರ್
ಪುಣೆ: ಭೀಮಾ ಕೋರೆಗಾಂವ್ ಯುದ್ಧದ 208ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿರುವ ‘ಜಯ ಸ್ತಂಭ’ಕ್ಕೆ ಸಾವಿರಾರು ಜನರು ಭೇಟಿನೀಡಿ, ಹುತಾತ್ಮರಿಗೆ ನಮನ ಸಲ್ಲಿಸಿದರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಹಾಗೂ ಮರಾಠ ಪೇಶ್ವೆ ಬಣದ ನಡುವೆ ಜನವರಿ 1, 1818ರಂದು ಯುದ್ಧವು ನಡೆದಿತ್ತು.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ವಂಚಿತ ಬಹುಜನ ಅಘಾಡಿ ಮುಖ್ಯಸ್ಥರಾದ ಪ್ರಕಾಶ್ ಅಂಬೇಡ್ಕರ್ ಸೇರಿದಂತೆ ಹಲವು ನಾಯಕರು ‘ಜಯ ಸ್ತಂಭ’ಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪುಣೆ ಮತ್ತು ಅಹ್ಮದ್‌ನಗರವನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿರುವ ಪೆರ್ನೆ ಗ್ರಾಮದಲ್ಲಿ ಸ್ಮಾರಕವಿದ್ದು, ಇಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.