
ಪ್ರಜಾವಾಣಿ ವಾರ್ತೆಲಖನೌ: ಸಂಸ್ಕೃತ ವಿಭಾಗಕ್ಕೆ ನೇಮಿಸಲಾಗಿದ್ದ ಮುಸ್ಲಿಂ ಸಮುದಾಯದ ಸಹಾಯಕ ಪ್ರಾಧ್ಯಾಪಕ ಫಿರೋಜ್ ಖಾನ್ ಅವರನ್ನು ಇತರೆ ವಿಭಾಗಕ್ಕೆ ವರ್ಗಾಯಿಸಲು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ಉದ್ದೇಶಿಸಿದೆ.
ಸಂಸ್ಕೃತದಲ್ಲಿ ಪಿಎಚ್.ಡಿ ಪದವಿ ಮಾಡಿದ್ದ ಫಿರೋಜ್ ಖಾನ್ ಅವರನ್ನು ಇತ್ತೀಚೆಗೆ ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ್ ವಿಜ್ಞಾನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸಲಾಗಿತ್ತು. ಆದರೆ, ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.