ADVERTISEMENT

ಕೋವಿಡ್ 19: ಒಂದು ತಿಂಗಳ ಮನೆ ಬಾಡಿಗೆ ವಿನಾಯ್ತಿ ಘೋಷಿಸಿದ ಓನರ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 3:37 IST
Last Updated 19 ಏಪ್ರಿಲ್ 2020, 3:37 IST
ಭುವನೇಶ್ವರ್ ದಲ್ಲಿ ಒಂದು ತಿಂಗಳ ಬಾಡಿಗೆ ವಿನಾಯ್ತಿ ಘೋಷಿಸಿದ ಮನೆ ಮಾಲೀಕಳು
ಭುವನೇಶ್ವರ್ ದಲ್ಲಿ ಒಂದು ತಿಂಗಳ ಬಾಡಿಗೆ ವಿನಾಯ್ತಿ ಘೋಷಿಸಿದ ಮನೆ ಮಾಲೀಕಳು   

ಭುವನೇಶ್ವರ್ (ಒಡಿಶಾ): ಲಾಕ್‌‌ಡೌನ್‌ನಿಂದಾಗಿ ಹಲವರು ಸಮಸ್ಯೆಗೆ ಸಿಲುಕಿದ್ದು, ಉಳ್ಳವರು ಇವರಿಗೆ ವಿವಿಧ ಬಗೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ, ಭುವನೇಶ್ವರದ ಮಹಿಳೆಯೊಬ್ಬರು ತಮ್ಮ ಏಳು ಮನೆಗಳಲ್ಲಿ ಬಾಡಿಗೆಯಲ್ಲಿರುವ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನೇ ಪಡೆದುಕೊಳ್ಳದೆ ವಿನಾಯ್ತಿ ನೀಡಿ ಗಮನ ಸೆಳೆದಿದ್ದಾರೆ.

ಇಲ್ಲಿನ ಸುಧಾಮಿನಿ ಸಮಂತರಾಯ್ ಎಂಬುವ ಮಹಿಳೆಯೇ ಒಂದು ತಿಂಗಳ ಮನೆ ಬಾಡಿಗೆ ವಿನಾಯ್ತಿ ಘೋಷಿಸಿರುವವರು. ಈ ಸಂಬಂಧ ಮಾತನಾಡಿರುವ ಅವರು, ಲಾಕ್‌ಡೌನ್ ಸಮಯದಲ್ಲಿ ಎಲ್ಲರೂಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ನಮ್ಮ ಮನೆಗಳಲ್ಲಿಬಾಡಿಗೆದಾರರಾಗಿ ಇರುವವರು ಸಣ್ಣ ಸಣ್ಣ ವ್ಯಾಪಾರ ಮಾಡುವವರು, ಅಥವಾ ಸಣ್ಣ ಕಂಪನಿಗಳಲ್ಲಿ ಕೆಲಸ ಮಾಡುವವರು. ಅವರಿಗೆ ನಾನು ಒಂದು ತಿಂಗಳ
ಬಾಡಿಗೆ ವಿನಾಯ್ತಿ ಘೋಷಿಸಿ ಈ ಮೂಲಕಸಹಾಯ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT