ADVERTISEMENT

ನಿರುದ್ಯೋಗ.. ವಲಸೆ.. ಖರ್ಗೆ, ರಾಹುಲ್ ಭೇಟಿ ಬಳಿಕ ತೇಜಸ್ವಿ ಯಾದವ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2025, 3:18 IST
Last Updated 16 ಏಪ್ರಿಲ್ 2025, 3:18 IST
<div class="paragraphs"><p>ಕಾಂಗ್ರೆಸ್ ನಾಯಕರೊಂದಿಗೆ ತೇಜಸ್ವಿ ಯಾದವ್ ಸಭೆ</p></div>

ಕಾಂಗ್ರೆಸ್ ನಾಯಕರೊಂದಿಗೆ ತೇಜಸ್ವಿ ಯಾದವ್ ಸಭೆ

   

– ಪಿಟಿಐ ಚಿತ್ರ

ಪಟ್ನಾ: ಕಾಂಗ್ರೆಸ್ ನಾಯಕರೊಂದಿಗಿನ ಸಭೆ ರಚನಾತ್ಮಕ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯ ಬಗ್ಗೆಯಾಗಿತ್ತು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

ADVERTISEMENT

ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಟ್ನಾಗೆ ಬಂದಿಳಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಸಭೆ ಚೆನ್ನಾಗಿತ್ತು. ಕಾಂಗ್ರೆಸ್ ನಾಯಕರೊಂದಿಗೆ ಇಂದು ಸಭೆ ನಡೆಯಿತು. ಮುಂದಿನ ಚುನಾವಣೆ ಸಂಬಂಧ ಹಲವು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಿತು. ಇದು ಮೊದಲನೇ ಸಭೆಯಲ್ಲ. ಇಂತಹ ಸಭೆಗಳು ಮುಂದುವರಿಯಲಿದೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್, ಎಡಪಕ್ಷಗಳು ಹಾಗೂ ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ ಒಳಗೊಂಡಿರುವ ಮೈತ್ರಿಕೂಟದ ಮುಂದಿನ ಸಭೆ ಏಪ್ರಿಲ್ 17ರಂದು ಪಟ್ನಾದಲ್ಲಿ ನಡೆಯಲಿದ್ದು, ಅಲ್ಲಿ ವಿಸ್ತೃತವಾದ ಚರ್ಚೆ ನಡೆಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೀಟು ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ತೇಜಸ್ವಿ ನಿರಾಕರಿಸಿದರು.

ಬಿಹಾರದ ಜನರನ್ನು ನಿರುದ್ಯೋಗ, ಅಪರಾಧಗಳಿಂದ ಮುಕ್ತಗೊಳಿಸುವ, ವಲಸೆ ತಪ್ಪಿಸುವ ಬಗ್ಗೆ ಚರ್ಚೆ ನಡೆಯಿತು ಎಂದು ಅವರು ಹೇಳಿದ್ದಾರೆ.

ತಂದೆ ಲಾಲೂ ಯಾದವ್ ಅವರ ಆರೋಗ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಆರೋಗ್ಯದಲ್ಲಿ ಚೇತರಿಕೆ ಇದ್ದು, ಶೀಘ್ರದಲ್ಲೇ ಪಟ್ನಾಗೆ ಮರಳಲಿದ್ದಾರೆ’ ಎಂದರು.

2010ರ ಹಾಗೆ ಈ ಬಾರಿ ಎನ್‌ಡಿಎ 200ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲಿದೆ ಎನ್ನುವ ನಿತೀಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇಂಥ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಆದರೆ ಒಂದಂತೂ ಸ್ಷಪ್ಟ; ನಿರುದ್ಯೋಗ, ಹಣದುಬ್ಬರ, ವಲಸೆ ಹಾಗೂ ಬಡತನದಿಂದ ಮುಕ್ತಿ ಹೊಂದಲು, ಎನ್‌ಡಿಎ ಸರ್ಕಾರನ್ನು ತೆಗೆದುಹಾಕಬೇಕು ಎಂದು ಜನ ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.