ADVERTISEMENT

ಮೋದಿಯವರೇ ಸುಳ್ಳು ಹೇಳಬೇಡಿ, ಬಿಹಾರಿಗಳಿಗೆ ನೀವು ಉದ್ಯೋಗ ನೀಡಿದ್ದೀರಾ?: ರಾಹುಲ್

ಏಜೆನ್ಸೀಸ್
Published 23 ಅಕ್ಟೋಬರ್ 2020, 8:43 IST
Last Updated 23 ಅಕ್ಟೋಬರ್ 2020, 8:43 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವಾಡಾ (ಬಿಹಾರ): ಮೋದಿಯವರೇ,ಬಿಹಾರದ ಜನರ ಮುಂದೆ ಸುಳ್ಳು ಹೇಳಬೇಡಿ. ನೀವು ಬಿಹಾರಿಗಳಿಗೆ ಉದ್ಯೋಗ ನೀಡಿದ್ದೀರಾ? ಕಳೆದ ಚುನಾವಣೆಯಲ್ಲಿ ನೀವು 2 ಕೋಟಿ ಉದ್ಯೋಗದ ಭರವಸೆ ಕೊಟ್ಟಿದ್ದಿರಿ. ಆದರೆ ಯಾರೊಬ್ಬರಿಗೂ ಉದ್ಯೋಗ ಸಿಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕರಾಹುಲ್ ಗಾಂಧಿ ಹೇಳಿದ್ದಾರೆ.

ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ತೇಜಸ್ವಿ ಯಾದವ್ ಜತೆ 'ಬದಲಾವ್ ಸಂಕಲ್ಪ್' ರ‍್ಯಾಲಿಯಲ್ಲಿ ಮಾತನಾಡಿದರಾಹುಲ್, ಮೋದಿಯವರುಸೇನಾಪಡೆ , ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳ ಮುಂದೆ ತಲೆ ಬಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಮನೆಗೆ ಹೋದ ಮೇಲೆ ಅಂಬಾನಿ ಮತ್ತು ಅದಾನಿಗೆ ಮಾತ್ರ ಕೆಲಸ ಮಾಡುತ್ತಾರೆ ಎಂದಿದ್ದಾರೆ.

ನೀವು ನಿಮ್ಮ ಹಣವನ್ನು ಬ್ಯಾಂಕ್‌ನಲ್ಲಿಟ್ಟಿದ್ದೀರಾ? ಇದು ಶ್ರೀಮಂತರ ಜೇಬಲ್ಲಿದೆ. ಕಪ್ಪು ಹಣದ ವಿರುದ್ಧ ಹೋರಾಡುವುದಾಗಿ ಅವರು ಹೇಳಿದ್ದರು.ಆದರೆ ಅದಾನಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ನೀವು ನೋಡಿದ್ದೀರಾ? ಇವರೆಲ್ಲರೂ ಹವಾನಿಯಂತ್ರಿತಕೋಣೆಗಳಲ್ಲಿರುತ್ತಾರೆ. ನರೇಂದ್ರ ಮೋದಿಯವರು ಶ್ರೀಮಂತರ ಪರವಾಗಿದ್ದಾರೆ.ರೈತರು ಮತ್ತು ಸಣ್ಣ ಉದ್ಯಮಿಗಳನ್ನು ಕಡೆಗಣಿಸುತ್ತಿದ್ದಾರೆ. ಮೋದಿಯವರು ಇತ್ತೀಚೆಗೆ ಮೂರು ರೈತ ವಿರೋಧಿ ಮಸೂದೆ ತಂದಿದ್ದಾರೆ.

ADVERTISEMENT

ಚೀನಾ ವಿರುದ್ಧದ ಸಂಘರ್ಷದಲ್ಲಿ ನಮ್ಮ 20 ಯೋಧರು ಹುತಾತ್ಮರಾದರು.ಚೀನಾನಮ್ಮ 1200 ಕಿಮಿ ಭೂಭಾಗವನ್ನು ಅತಿಕ್ರಮಿಸಿತು.ಚೀನಾ ನಮ್ಮ ಗಡಿಯೊಳಗೆ ನುಗ್ಗಿದರೂ ಯಾರೊಬ್ಬರೂ ಒಳಗೆ ಬಂದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನಮ್ಮ ಯೋಧರನ್ನು ಅವಮಾನಿಸಿದ್ದು ಯಾಕೆ? ಇವತ್ತು ನಾನು ತಲೆಬಾಗುತ್ತಿದ್ದೇನೆ ಅಂತಿದ್ದಾರೆ ಎಂದು ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಆತ್ಮ ನಿರ್ಭರ ಭಾರತ ಸಾಕಾರಗೊಳಿಸಲು ನಿತೀಶ್ ಕುಮಾರ್‌ಗೆ ಅಧಿಕಾರ ನೀಡಿ: ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.