ADVERTISEMENT

Bihar Elections | ಮೊದಲ ಹಂತದಲ್ಲಿ ಸಂಜೆ 5ರವರೆಗೆ ಶೇ 60ರಷ್ಟು ಮತದಾನ

ಪಿಟಿಐ
Published 6 ನವೆಂಬರ್ 2025, 16:14 IST
Last Updated 6 ನವೆಂಬರ್ 2025, 16:14 IST
<div class="paragraphs"><p>ಬಿಹಾರ ಚುನಾವಣೆ</p></div>

ಬಿಹಾರ ಚುನಾವಣೆ

   

(ಪಿಟಿಐ ಚಿತ್ರ)

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದು (ಗುರುವಾರ) ನಡೆದಿದೆ. ಸಂಜೆ 5 ಗಂಟೆ ವೇಳೆಗೆ ಶೇ 60.18ರಷ್ಟು ಮತದಾನವಾಗಿದೆ.

ADVERTISEMENT

ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ವಾಹನದ ಮೇಲೆ ದಾಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಿಂಸಾಚಾರದ ವರದಿಯಾಗಿದೆ.

ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು 3.75 ಕೋಟಿ ಮತದಾರರಿದ್ದಾರೆ.

ಬೆಗುಸರಾಯ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 67.32ರಷ್ಟು ಮತದಾನವಾಗಿದೆ. ಹಾಗೆಯೇ ಸಮಸ್ಟಿಪುರದಲ್ಲಿ ಶೇ 66.65, ಮಾಧೇಪುರದಲ್ಲಿ ಶೇ 65.74ರಷ್ಟು ಮತದಾನವಾಗಿದೆ.

ಮೊದಲ ಹಂತದಲ್ಲಿ ‘ಇಂಡಿಯಾ’ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌, ಉಪ ಮುಖ್ಯಮಂತ್ರಿ ಬಿಜೆಪಿಯ ಸಾಮ್ರಾಟ್‌ ಚೌಧರಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ.

ಬಿಹಾರ: ಶಾಂತಿಯುತ ಮತದಾನ

ಪಟ್ನಾ: ಬಿಹಾರದ ಅರ್ಧದಷ್ಟು ಜನರು ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಈ ಬಾರಿ ನಿತೀಶ್‌ ಕುಮಾರ್‌, ಲಾಲೂ, ರಾಬ್ಡಿ ದೇವಿ ಸ್ಪರ್ಧಿಸಿರಲಿಲ್ಲ. 

ಪಟ್ನಾದಿಂದ 50 ಕಿ.ಮೀ ದೂರದಲ್ಲಿರುವ ಭಕ್ತಿಯಾರ್‌ಪುರದ ಮತಗಟ್ಟೆಯಲ್ಲಿ ನಿತೀಶ್ ಕುಮಾರ್‌ ಮೊದಲಿಗರಾಗಿ ಹಕ್ಕು ಚಲಾಯಿಸಿದರು. ಲಾಲೂ ಮತ್ತು ಕುಟುಂಬ ಸದಸ್ಯರು ಪಟ್ನಾದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬೆಗೂಸರಾಯ್‌ನಲ್ಲಿ ಗರಿಷ್ಠ ಹಾಗೂ ಶೇಖಪುರದಲ್ಲಿ ಕನಿಷ್ಠ ಮತದಾನ ದಾಖಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಂತರ ಬಿಹಾರದಲ್ಲಿ ಒಟ್ಟು ಮತದಾರರ ಸಂಖ್ಯೆ 7.9 ಕೋಟಿಯಿಂದ 7.4 ಕೋಟಿಗೆ ಇಳಿಕೆಯಾಗಿತ್ತು.

ಮೊದಲ ಹಂತದ ಚುನಾವಣೆಯಲ್ಲಿ ತೇಜಸ್ವಿ ಯಾದವ್‌ (ರಘೋಪುರ), ತೇಜ್‌ ಪ್ರತಾಪ್‌ (ಮಹುವಾ), ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ (ತಾರಾಪುರ), ವಿಜಯ್‌ ಸಿನ್ಹಾ (ಲಖಿಸರೈ), ಮೈಥಿಲಿ ಠಾಕೂರ್‌ (ಅಲಿನಗರ), ಅನಂತ್‌ ಸಿಂಗ್‌ (ಮೊಕಾಮ) ದಿ. ಶಹಾಬುದ್ದೀನ್‌ ಪುತ್ರ ಒಸಾಮ (ರಘುನಂತಪುರ) ಸೇರಿದಂತೆ 121 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ದರ್ಭಂಗಾದ ಕುಶೇಶ್ವರ ಆಸ್ಥಾನ್ ಕ್ಷೇತ್ರದಲ್ಲಿ ಪ್ರವಾಹದ ಸಂಕಷ್ಟದ ನಡುವೆಯೂ ಮತದಾರರು ಧೈರ್ಯದಿಂದ ಮತದಾನದಲ್ಲಿ ಭಾಗವಹಿಸಿದರು.

‘ಎನ್‌ಡಿಎ ಮೈತ್ರಿಕೂಟ ಪ್ರಾಬಲ್ಯ ಹೊಂದಿರುವ ಕಡೆ ಮತದಾನವನ್ನು ಉದ್ದೇಶಪೂರ್ವಕವಾಗಿಯೇ ನಿಧಾನಗೊಳಿಸಲಾಗಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ನಮ್ಮ ಆರೋಪವನ್ನು ಚುನಾವಣಾ ಆಯೋಗವು ತಕ್ಷಣವೇ ತಿರಸ್ಕರಿಸಿತು’ ಎಂದು ಆರ್‌ಜೆಡಿ ‘ಎಕ್ಸ್‌’ನಲ್ಲಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.