ADVERTISEMENT

ಬಿಹಾರ ಚುನಾವಣೆ ಫಲಿತಾಂಶ ಪ್ರಧಾನಿ ಮೋದಿಯವರ ಗೆಲುವು: ಚಿರಾಗ್ ಪಾಸ್ವಾನ್

ಪಿಟಿಐ
Published 11 ನವೆಂಬರ್ 2020, 2:28 IST
Last Updated 11 ನವೆಂಬರ್ 2020, 2:28 IST
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)   

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರ ಗೆಲುವು. ಜನರು ಅವರ ಮೇಲೆ ಇರಿಸಿದ ವಿಶ್ವಾಸವನ್ನು ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಬಣ್ಣಿಸಿದ್ದಾರೆ.

ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಮಿತ್ರಪಕ್ಷ ಜೆಡಿಯುವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ಪಕ್ಷ ಎಲ್‌ಜೆಪಿ ಒಂದು ಸ್ಥಾನವನ್ನಷ್ಟೇ ಗೆಲ್ಲುವುದು ಸಾಧ್ಯವಾಗಿದೆ. ಆದಾಗ್ಯೂ, ನಮ್ಮ ಪಕ್ಷ ಅಧಿಕಾರಕ್ಕಾಗಿ ತಲೆ ಬಾಗಲಿಲ್ಲ ಎನ್ನಲು ಹೆಮ್ಮೆಪಡುತ್ತೇನೆ ಎಂದು ಚಿರಾಗ್ ಟ್ವೀಟ್ ಮಾಡಿದ್ದಾರೆ. 2015ರಲ್ಲಿ ಎಲ್‌ಜೆಪಿ 2 ಸ್ಥಾನ ಗೆದ್ದಿತ್ತು.

‘ಎಲ್‌ಜೆಪಿಯ ಎಲ್ಲ ಅಭ್ಯರ್ಥಿಗಳು ಯಾವುದೇ ಮೈತ್ರಿ ಮಾಡಿಕೊಳ್ಳದೆ ಚೆನ್ನಾಗಿಯೇ ಸೆಣಸಿದ್ದಾರೆ. ಪಕ್ಷದ ಮತಹಂಚಿಕೆ ಪ್ರಮಾಣ ಹೆಚ್ಚಾಗಿದೆ. ಬಿಹಾರ ಮೊದಲು, ಬಿಹಾರಿಗ ಮೊದಲು ಎಂಬ ಧ್ಯೇಯದೊಂದಿಗೆ ಚುನಾವಣೆ ಎದುರಿಸಿದ್ದೆವು. ಪ್ರತಿ ಜಿಲ್ಲೆಯಲ್ಲಿಯೂ ಪಕ್ಷವನ್ನು ಬಲಪಡಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಪಕ್ಷಕ್ಕೆ ಪ್ರಯೋಜನವಾಗಲಿದೆ’ ಎಂದು ಅವರು ಹೇಳಿದ್ದಾರೆ.

140 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ ಶೇ 5.68ರಷ್ಟು ಮತ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.