
ಡಿಂಪಲ್ ಯಾದವ್ ( ಸಂಗ್ರಹ ಚಿತ್ರ)
ಲಖನೌ: ಬಿಹಾರ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದು, ಇದರ ಭಾಗವಾಗಿ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಲು ಸಮಾಜವಾದಿ ಪಕ್ಷ 20 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಸೇರಿದಂತೆ 20 ಮಂದಿ ಇದ್ದಾರೆ.
ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಸ್‌ಪಿ ನಾಯಕ ಸನಾತನ್ ಪಾಂಡೆ ಮಾತನಾಡಿ, ಬಿಹಾರದಲ್ಲಿ ಪ್ರಚಾರ ಮಾಡುವುದಾಗಿ ಮತ್ತು ಮಹಾಘಟಬಂಧನ್‌ಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಬಿಹಾರದ ಛಪ್ರಾ, ಅರಾ ಮತ್ತು ಸಿವಾನ್ ಸೇತುವೆಗಳು ಉತ್ತರ ಪ್ರದೇಶವನ್ನು ಸಂಪರ್ಕಿಸುತ್ತವೆ. ಈ ಸಂಪರ್ಕ ಇಲ್ಲದಿದ್ದರೆ ನಮ್ಮ ಅರ್ಧಕ್ಕಿಂತ ಹೆಚ್ಚು ಹುಡುಗರು ಅವಿವಾಹಿತರಾಗಿಯೇ ಉಳಿಯುತ್ತಿದ್ದರು. ಉತ್ತರ ಪ್ರದೇಶ ಮತ್ತು ಬಿಹಾರ ನಡುವಿನ ಸಂಬಂಧದ ಬಗ್ಗೆ ಪಾಂಡೆ ಮಾತನಾಡಿದ್ದಾರೆ.
ನಾನು ಬಿಹಾರಕ್ಕೆ ಹೋಗಿ ಮಹಾಘಟಬಂಧನ್ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡುವುದಾಗಿ ಪಾಂಡೆ ತಿಳಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯು ನವೆಂಬರ್ 6 ಮತ್ತು ನವೆಂಬರ್ 11 ರಂದು ನಡೆಯಲಿದ್ದು, ಫಲಿತಾಂಶಗಳು ನವೆಂಬರ್ 14 ರಂದು ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.