ADVERTISEMENT

125 ಸ್ಥಾನಗಳಲ್ಲಿ ಎನ್‌ಡಿಎ, ಮಹಾಘಟಬಂಧನ ಮೈತ್ರಿಕೂಟ ತೀವ್ರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 9:23 IST
Last Updated 10 ನವೆಂಬರ್ 2020, 9:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಬಿಹಾರದ ಒಟ್ಟು 243 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧಪಕ್ಷ ಮಹಾಘಟಬಂಧನ ಮೈತ್ರಿಕೂಟವು 125 ಸ್ಥಾನಗಳಲ್ಲಿ ತೀವ್ರ ಪೈಪೋಟಿ ನಡೆಸಿವೆ

ಆರ್‌ಜೆಡಿಯು 36 ಸ್ಥಾನಗಳಲ್ಲಿ, ಕಾಂಗ್ರೆಸ್‌ 13 ಸ್ಥಾನಗಳಲ್ಲಿ, ಸಿಪಿಐ (ಮಾರ್ಕ್ಸಿಸ್ಟ್‌– ಲೆನಿನಿಸ್ಟ್‌) (ಲಿಬರೇಶನ್‌) ಆರು ಕಡೆ ಮತ್ತು ಸಿಪಿಐ (ಎಂ) ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಜುಮೈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೇಯಸಿ ಸಿಂಗ್‌ ಮುನ್ನಡೆಯಲ್ಲಿದ್ದಾರೆ.

ADVERTISEMENT

ರಾಜ್ಯ ಸಚಿವ ಬಿಜೆಪಿ ನಾಯಕ ನಂದ ಕಿಶೋರ್‌ ಯಾದವ್‌ ಅವರು ಹಿನ್ನಡೆ ಅನುಭವಿಸಿದ್ದು ಕಾಂಗ್ರೆಸ್‌ನ ಪ್ರವೀಣ್‌ ಸಿಂಗ್‌ ಅವರು 1,1778 ಮತಗಳಿಂದ ಮುಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.