ADVERTISEMENT

ಬಿಹಾರದಲ್ಲಿ 2 ದಿನಗಳಲ್ಲಿ 16 ಮಂದಿ ಸಾವು; ಕಳ್ಳಭಟ್ಟಿ ದುರಂತ ಶಂಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 15:48 IST
Last Updated 17 ಜುಲೈ 2021, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆತಿಯಾ: ಬಿಹಾರದಲ್ಲಿ ಕಳೆದ ಎರಡು ದಿನಗಳಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಕಳ್ಳಭಟ್ಟಿ ಸೇವನೆಯಿಂದ ಈ ದುರಂತ ನಡೆದಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಚಂಪಾರನ್ ಜಿಲ್ಲಾಡಳಿತವು ನೀಡಿದ ಮಾಹಿತಿಯ ಪ್ರಕಾರ, ಸಾವಿಗೆ ಮುಂಚಿತವಾಗಿ ಮದ್ಯ ಸೇವಿಸಿರುವುದನ್ನು ಮೃತಪಟ್ಟಿರುವ ನಾಲ್ವರ ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ.

ಇವರೆಲ್ಲರೂ ದುರ್ವಾಗ್ರಾಮದ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ಹಾಗೂ ಶುಕ್ರವಾರದಂದು ತಲಾ ಎಂಟು ಮಂದಿ ಸಾವಿಗೀಡಾಗಿದ್ದಾರೆ.

ಕಳ್ಳಭಟ್ಟಿ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ 36 ವರ್ಷದ ಮುಮ್ತಾಜ್ ಮಿಯಾನ್ ಸಂಬಂಧಿಕರ ದೂರಿನ ಅನ್ವಯ ಶಂಕಿತ ಆರೋಪಿ ಸುಮಿತ್ (22) ಸೇರಿದಂತೆ ಐವರನ್ನು ಬಂಧಿಸಲಾಗಿದೆ.

2016ರಲ್ಲಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವು ಮದ್ಯ ಮಾರಾಟ ಹಾಗೂ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನುಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.