ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ, 7.24 ಕೋಟಿ ಮತದಾರರ ಪೈಕಿ ಶೇ 98.2ರಷ್ಟು ಜನರು ಸಲ್ಲಿಸಿದ್ದ ದಾಖಲೆಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಭಾನುವಾರ ಹೇಳಿದೆ.
ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಒದಗಿಸಿರುವ ವಿವರಗಳನ್ನು ಉಲ್ಲೇಖಿಸಿ ಆಯೋಗವು ಈ ಮಾಹಿತಿ ನೀಡಿದೆ.
ಕರಡು ಮತದಾರರ ಪಟ್ಟಿ ಕುರಿತು ಬೇಡಿಕೆಗಳು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಇನ್ನೂ 8 ದಿನಗಳು ಬಾಕಿ ಇವೆ. ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಕೋರಿ ಅರ್ಜಿ ಸಲ್ಲಿಸುವ ವೇಳೆ, ಆಕ್ಷೇಪಣೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಮತದಾರರು ಸಲ್ಲಿಸಬಹುದು ಎಂದೂ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
‘ಜೂನ್ 24ರಿಂದ ಆಗಸ್ಟ್ 24ರ ವರೆಗೆ, ಪ್ರತಿ ದಿನ ಸರಾಸರಿ ಶೇ 1.64ರಷ್ಟು ಮತದಾರರು ದಾಖಲೆಗಳನ್ನು ಸಲ್ಲಿಸಿದಂತಾಗಿದೆ. ಇನ್ನೂ ಶೇ1.8ರಷ್ಟು ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಿದ್ದು ಇದಕ್ಕಾಗಿ ಸೆಪ್ಟೆಂಬರ್ 1ರ ವರೆಗೆ ಅವಕಾಶ ಇದೆ’ ಎಂದು ಆಯೋಗ ಹೇಳಿದೆ.
18 ವರ್ಷ ತುಂಬಿರುವ 3,28,847 ಹೊಸ ಮತದಾರರು ಅರ್ಜಿ ಸಲ್ಲಿಸಿದ್ದಾರೆ ಎಂದೂ ಹೇಳಿದೆ.
ಈಗ ಸ್ವೀಕರಿಸಲಾಗಿರುವ ಅರ್ಜಿಗಳು ಹಾಗೂ ಆಕ್ಷೇಪಣೆಗಳ ಕುರಿತು ಸೆಪ್ಟೆಂಬರ್ 25ರ ಒಳಗಾಗಿ ಅಂತಿಮ ನಿರ್ಧಾರ ತೆಗೆದುಕೊಂಡು ಸೆಪ್ಟೆಂಬರ್ 30ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದುಚುನಾವಣಾ ಆಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.