ADVERTISEMENT

ಎ.ಐ ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್: ಎ‍ಪ್ಸ್ಟೀನ್ ಫೈಲ್ಸ್ ವಿವಾದ ಕಾರಣ ?

ಪಿಟಿಐ
Published 17 ಫೆಬ್ರುವರಿ 2026, 7:25 IST
Last Updated 17 ಫೆಬ್ರುವರಿ 2026, 7:25 IST
   

ನವದೆಹಲಿ: ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಎ.ಐ ಶೃಂಗಸಭೆಯಿಂದ ಹೊರಗುಳಿದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ನವದೆಹಲಿಯಲ್ಲಿ ಫೆ.16 ರಿಂದ ಫೆ.20ರವರೆಗೆ ಅಂತರರಾಷ್ಟ್ರೀಯ ಮಟ್ಟದ ಎ.ಐ ಶೃಂಗಸಭೆ ನಡೆಯುತ್ತಿದೆ. ಇದರಲ್ಲಿ ಜಗತ್ತಿನ ಪ್ರಮುಖ ಉದ್ಯಮಿಗಳು, ತಂತ್ರಜ್ಞಾನ ನಿಪುಣರು, ರಾಜಕೀಯ ನಾಯಕರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.

ಬಿಲ್ ಗೇಟ್ಸ್ ಅವರು ಆಂಧ್ರಪ್ರದೇಶ ಪ್ರವಾಸದಲ್ಲಿದ್ದಾರೆ. ಫೆ.19ರಂದು ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಎ.ಐ. ಶೃಂಗಸಭೆಯ ಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಶೃಂಗಸಭೆಯಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಅವರ ಹೆಸರು ಕಾಣುತ್ತಿಲ್ಲ.

ADVERTISEMENT

ಎ‍ಪ್ಸ್ಟೀನ್ ಫೈಲ್ಸ್ ವಿವಾದದ ಕಾರಣ, ಬಿಲ್ ಗೇಟ್ಸ್‌ ಅವರು ಎ.ಐ ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ.

ಎ‍ಪ್ಸ್ಟೀನ್ ಫೈಲ್ಸ್‌ನಲ್ಲಿ ಬಿಲ್ ಗೇಟ್ಸ್‌ ಅವರ ಹೆಸರು ಕೇಳಿಬಂದಿತ್ತು. ಆದರೆ, ಇದು ಸಂಪೂರ್ಣವಾಗಿ ಅಸಂಬದ್ಧ ಎಂದು ಅವರ ವಕ್ತಾರ ಹೇಳಿಕೆ ನೀಡಿದ್ದರು.

ಎ.ಐ ಶೃಂಗಸಭೆಯಲ್ಲಿ ಭಾಗವಹಿಸಬೇಕಿದ್ದ ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಕೂಡ ಕೊನೆ ಕ್ಷಣದಲ್ಲಿ ಭಾರತದ ಪ್ರವಾಸವನ್ನು ರದ್ದು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.