ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದ್ಗೀರ್ ನಗರದಲ್ಲಿ ಹಕ್ಕಿ ಜ್ವರಕ್ಕೆ 50ಕ್ಕೂ ಹೆಚ್ಚು ಕಾಗೆಗಳು ಬಲಿಯಾಗಿವೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
‘ಭೋಪಾಲ್‌ನ ಪಶುವೈದ್ಯಕೀಯ ಪ್ರಯೋಗಲಾಯದಿಂದ ಶನಿವಾರ ಬಂದ ವರದಿಯು, ಕಾಗೆಗಳು ಏವಿಯನ್ ಇನ್‌ಫ್ಲೂಯೆಂಜಾ (ಎಚ್5ಎನ್1)ನಿಂದ ಮೃತಪಟ್ಟಿರುವುದನ್ನು ದೃಢಪಡಿಸಿದೆ’ ಎಂದು ಪಶುಸಂಗೋಪನೆ ಆಯುಕ್ತ ಡಾ. ಶ್ರೀಧರ್ ಶಿಂಧೆ ತಿಳಿಸಿದರು.
‘ಜ. 18ರವರೆಗೆ ಉದ್ಗೀರ್ ನಗರದಲ್ಲಿ 50ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ರೋಗ ಹರಡದಂತೆ ತಡೆಯಲು ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮ ಕೈಗೊಂಡಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.