ADVERTISEMENT

ನಾಗ್ಪುರ ಮೂಲದ ಬಿಜೆಪಿ ಕಾರ್ಯಕರ್ತೆ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 16:13 IST
Last Updated 9 ಆಗಸ್ಟ್ 2023, 16:13 IST
BJP
BJP   

ಮುಂಬೈ: ನಾಗ್ಪುರ ಮೂಲದ ಬಿಜೆಪಿ ಕಾರ್ಯಕರ್ತೆ ಸನಾ ಖಾನ್ ವಾರದ ಹಿಂದೆ ಜಬಲ್ಪುರದಲ್ಲಿ ನಾಪತ್ತೆಯಾಗಿದ್ದು, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಪೊಲೀಸರು ತನಿಖೆ ಕೈಗೆತ್ತಿಕೊಂಡು, ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಸನಾ ಖಾನ್ ಅಲಿಯಾಸ್ ಹೀನಾ (35) ಬಿಜೆಪಿಯ ನಾಗ್ಪುರ ಘಟಕದ ಅಲ್ಪಸಂಖ್ಯಾತರ ಮೋರ್ಚಾದಲ್ಲಿದ್ದವರು.

ತಮ್ಮ ವ್ಯವಹಾರ ಪಾಲುದಾರರಾದ ಅಮಿತ್ ಅಲಿಯಾಸ್ ಪಪ್ಪು ಸಾಹು ಅವರನ್ನು ಭೇಟಿಯಾಗಲಿಕ್ಕಾಗಿ ಆ.1ರಂದು ಜಬಲ್ಪುರಕ್ಕೆ ಹೋಗಿದ್ದರು ಎನ್ನಲಾಗಿದೆ.

ADVERTISEMENT

ನಾಗ್ಪುರ ಪೊಲೀಸರ ತಂಡವು ತನಿಖೆಗಾಗಿ ಜಬಲ್ಪುರಕ್ಕೆ ಹೋಗಿದೆ. ಸಂಶಯಾಸ್ಪದ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಜಬಲ್ಪುರದ ಈಚೆಗಿನ ಮಾಹಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.