ADVERTISEMENT

Gujarat Election Results: ಮತ ಗಳಿಕೆಯಲ್ಲೂ ಬಿಜೆಪಿ ಉತ್ತಮ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 13:51 IST
Last Updated 8 ಡಿಸೆಂಬರ್ 2022, 13:51 IST
   

ಅಹಮದಾಬಾದ್:ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರಿ ಬಹುಮತ ಸಾಧಿಸಿ ಸತತ 7ನೇ ಬಾರಿಗೆ ಅಧಿಕಾರಕ್ಕೇರಲು ಸಿದ್ಧತೆ ಆರಂಭಿಸಿದೆ.

ಕಳೆದ (2017) ಚುನಾವಣೆಯಲ್ಲಿ 99 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಅದಕ್ಕಿಂತ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮುನ್ನುಗ್ಗುತ್ತಿದೆ. ಅದರೊಟ್ಟಿಗೆ ಈ ಬಾರಿಮತ ಗಳಿಕೆಯಲ್ಲೂ ಉತ್ತಮ ಸಾಧನೆಮಾಡಿದೆ.

182 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ಡಿಸೆಂಬರ್ 1 ಹಾಗೂ 5ರಂದು ಮತದಾನ ನಡೆದಿತ್ತು. ಇಂದು ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಸಂಜೆ 6.50ರ ವರೆಗೆಬಿಜೆಪಿ 147 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಕಳೆದ ಬಾರಿ 77 ಕ್ಷೇತ್ರ ಗೆದ್ದಿದ್ದ, ಕಾಂಗ್ರೆಸ್‌ ಈವರೆಗೆಕಾಂಗ್ರೆಸ್‌ 16 ಸ್ಥಾನಗಳಲ್ಲಿ ಜಯ ಸಾಧಿಸಿದೆ.ಆಮ್‌ ಆದ್ಮಿ ಪಕ್ಷ 5 ಕ್ಷೇತ್ರಗಳಲ್ಲಿ, ಪಕ್ಷೇತರರು 3 ಸ್ಥಾನ ಹಾಗೂ ಸಮಾಜವಾದಿ ಪಕ್ಷ 1 ಕಡೆ ಗೆಲುವು ಸಾಧಿಸಿವೆ.

ADVERTISEMENT

ಇನ್ನೂ 10 ಕ್ಷೇತ್ರಗಳ ಫಲಿತಾಂಶ ಬಾಕಿ ಇದ್ದು, ಬಿಜೆಪಿ 9 ಮತ್ತು ಕಾಂಗ್ರೆಸ್‌ 1ರಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಬಿಜೆಪಿ ಏರಿಕೆ; ಕಾಂಗ್ರೆಸ್‌ ಇಳಿಕೆ
2017ರ ಚುನಾವಣೆಯಲ್ಲಿ ಶೇ49.05 ರಷ್ಟು ಮತ ಗಳಿಸಿದ್ದ ಬಿಜೆಪಿ ಈವರೆಗೆ ಶೇ 52.50ರಷ್ಟು ಮತ ಗಳಿಸಿಕೊಂಡಿದೆ. ಶೇ 41.44 ರಷ್ಟಿದ್ದ ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣ ಈ ಬಾರಿ ಶೇ27.29ಕ್ಕೆ ಕುಸಿದಿದೆ.

ಇನ್ನೂಹತ್ತು ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಳ್ಳಬೇಕಿರುವುದರಿಂದ ಬಿಜೆಪಿ ಮತ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.

ಆಮ್‌ ಆದ್ಮಿ ಪಕ್ಷ ಶೇ12.92, ಎಐಎಂಐಎಂ ಶೇ 0.29, ಬಿಎಸ್‌ಪಿ ಶೇ 0.50, ಸಿಪಿಐ (ಎಂ) ಶೇ 0.03, ಜೆಡಿಎಸ್‌,ಸಿಪಿಐ ಹಾಗೂಸಿಪಿಐ (ಎಂಎಲ್‌–ಎಲ್‌) ತಲಾ ಶೇ 0.01 ರಷ್ಟು ಮತ ಪಡೆದಿವೆ. ಎನ್‌ಸಿಪಿ ಶೇ 0.24, ಎಸ್‌ಪಿ ಶೇ0.29, ಇತರರು ಶೇ 4.34 ರಷ್ಟು ಮತ ಗಳಿಸಿಕೊಂಡಿದ್ದು, ಶೇ1.57 ರಷ್ಟು ಮಂದಿ ನೋಟಾ ಒತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.