ನವದೆಹಲಿ: ‘ಚುನಾವಣೆ ಲಾಭಕ್ಕಾಗಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಬಿಜೆಪಿಯು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಮುಂದೆ ಚುನಾವಣೆಗಳಿಗೆ ಜಾರಿಗೊಳಿಸುವ ಮಾದರಿ ನೀತಿ ಸಂಹಿತೆಯಲ್ಲಿ ಇದರ ವಿರುದ್ಧ ಎಚ್ಚರಿಕೆಯನ್ನು ಸೇರಿಸಬೇಕು’ ಎಂದು ಸಿಪಿಎಂ ಪಕ್ಷ ಒತ್ತಾಯಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್, ವಿವೇಕ್ ಜೋಶಿ ಅವರನ್ನು ಭೇಟಿಯಾಗಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಮತ್ತು ಮುಖಂಡರಾದ ನಿಲೊಟ್‌ಪಲ್ ಬಸು ಮತ್ತು ಮುರಳೀಧರನ್ ಅವರು ಈ ಕುರಿತು ಗಮನಸೆಳೆದರು.
ಭೇಟಿ ಸಂದರ್ಭದಲ್ಲಿ ಸಿಪಿಎಂ ನಾಯಕರು ಆಯೋಗಕ್ಕೆ 11 ಪುಟಗಳ ಮನವಿಯನ್ನೂ ಸಲ್ಲಿಸಿದರು. ಚುನಾವಣಾ ಪ್ರಚಾರದ ಭಾಗಶಃ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂಬುದೂ ಇದರಲ್ಲಿ ಸೇರಿದೆ. ಅಲ್ಲದೆ, ಚುನಾವಣೆ ಭರವಸೆಯಾಗಿ ಆರ್ಥಿಕ ಯೋಜನೆ ಪ್ರಕಟಿಸುವ ನಡೆಗೆ ವಿರೋಧ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.