ನವದೆಹಲಿ: ಸಿಎಎ ವಿರುದ್ಧ ಪ್ರತಿಭಟನೆ ನಡೆಸಿ ದೇಶ ಒಡೆಯುವ ಕುರಿತು ಮಾತನಾಡುವ ಶರ್ಜೀಲ್ ಇಮಾಮ್ ನಂತಹ ವ್ಯಕ್ತಿಗಳಿಗೆ ಸಾರ್ವಜನಿಕವಾಗಿ ಗುಂಡು ಹೊಡೆದು ಕೊಲ್ಲಬೇಕು ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿಕೆ ನೀಡಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುವ ಮಹಿಳೆಯರಿಗೆ ಕೆಲಸವಿಲ್ಲ. ಇಂತಹ ಪ್ರತಿಭಟನೆಗಳಿಗೆ ಹಣಕಾಸಿನ ಮೂಲ ಯಾವುದು ಎಂಬುದರ ಕುರಿತು ತನಿಖೆಯಾಗಬೇಕು. ಇಮಾಮನ್ ನಂತಹ ವ್ಯಕ್ತಿಗಳು ಸಿಎಎಯಿಂದಾಗಿ ದೇಶ ಇಬ್ಭಾಗ ಮಾಡಬೇಕೆಂದು ಮಾತನಾಡುತ್ತಾರೆ. ಇಂತಹ ವ್ಯಕ್ತಿಗಳಿಗೆ ಸಾರ್ವಜನಿಕವಾಗಿ ಗುಂಡು ಹೊಡೆಯಬೇಕು ಎಂದು ಸಂಗೀತ್ ಸೋಮ್ ಹೇಳಿಕೆ ನೀಡಿದ್ದಾರೆ.
ಬಜೆಟ್ ಮಾಹಿತಿಗೆ: www.prajavani.net/budget-2020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.