ADVERTISEMENT

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ ₹ 100 ಕೋಟಿ ಆಮಿಷ: ದಿಗ್ವಿಜಯ್‌ ಸಿಂಗ್‌ 

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 5:41 IST
Last Updated 9 ಜನವರಿ 2019, 5:41 IST
   

ಭೋಪಾಲ್‌: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಉರುಳಿಸಲು ಬಿಜೆಪಿ ನಮ್ಮ ಶಾಸಕರಿಗೆ ₹100 ಕೋಟಿ ಆಮಿಷಒಡ್ಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ತಾವು ಮಾಡಿರುವ ಆರೋಪವನ್ನು ಸಾಕ್ಷಿ ಸಮೇತ ಸಾಬೀತುಪಡಿಸುವುದಾಗಿಸಿಂಗ್ ತಿಳಿಸಿದ್ದಾರೆ.

ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಸಬಲ್‌ಘರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬೈಜನಾಥ್ ಕುಶ್ವಾ ಅವರನ್ನು ಡಾಬಾವೊಂದಕ್ಕೆ ಕರೆದುಕೊಂಡು ಹೋಗಿ ಬಿಜೆಪಿಯ ಮಾಜಿ ಸಚಿವರಾದ ನರೋತ್ತಮ ಮಿಶ್ರಾ ಹಾಗೂ ವಿಶ್ವಾಸ್‌ ಸಾರಂಗ್ ಅವರೊಂದಿಗೆ ಭೇಟಿ ಮಾಡಿಸಿದ್ದಾರೆ. ಅವರು ನಮ್ಮ ಶಾಸಕನಿಗೆ ನೂರು ಕೋಟಿ ರೂಪಾಯಿ ಆಮಿಷಒಡ್ಡಿರುವುದಲ್ಲದೆ ಬಿಜೆಪಿ ಸರ್ಕಾರ ರಚನೆಯಾದರೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದಾರೆ ಎಂದು ದಿಗ್ವಿಜಯ್ಸಿಂಗ್ ಮಾಧ್ಯಮಗಳಿಗೆತಿಳಿಸಿದ್ದಾರೆ.

ADVERTISEMENT

ಬೈಜನಾಥ್ ಕುಶ್ವಾ ಮಾತ್ರವಲ್ಲದೆ ಇತರೆ ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ. ಆದರೆ ಕುಶ್ವಾಅವರಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿಸಚಿವ ಮಿಶ್ರಾ ಇದು ಕೇವಲ ಪ್ರಚಾರದ ತಂತ್ರ, ಸಾಕ್ಷಿಗಳು ಇದ್ದರೆ ದಿಗ್ವಿಜಯ್ ಸಿಂಗ್ ಬಹಿರಂಗಪಡಿಸಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲಿಎಂದು ಸವಾಲು ಹಾಕಿದ್ದಾರೆ.

ದಿಗ್ವಿಜಯ್‌ ಸಿಂಗ್ ಗಾಳಿ ಸುದ್ದಿಯ ಜನಕ ಎಂಬುದು ಎಲ್ಲರಿಗೂ ಗೊತ್ತಿದೆ, ಅವರ ಮಾತನ್ನು ಗಂಭೀರವಾಗಿಪರಿಗಣಿಸುವುದು ಬೇಡ ಎಂದು ಬಿಜೆಪಿಯ ವಿರೋಧ ಪಕ್ಷದ ನಾಯಕ ಗೋಪಾಲ್ ಭಾರ್ಗವ ತಿಳಿಸಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ ಪಕ್ಷ ಪಕ್ಷೇತರ ಶಾಸಕರೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.