ADVERTISEMENT

ಬಿಜೆಪಿಯು ದೊಡ್ಡ ಉದ್ಯಮಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ: ಪ್ರಿಯಾಂಕಾ ಗಾಂಧಿ

ಪಿಟಿಐ
Published 20 ಫೆಬ್ರುವರಿ 2022, 14:18 IST
Last Updated 20 ಫೆಬ್ರುವರಿ 2022, 14:18 IST
ಪ್ರಿಯಾಂಕಾ ಗಾಂಧಿ - ಪಿಟಿಐ ಸಂಗ್ರಹ ಚಿತ್ರ
ಪ್ರಿಯಾಂಕಾ ಗಾಂಧಿ - ಪಿಟಿಐ ಸಂಗ್ರಹ ಚಿತ್ರ   

ರಾಯ್‌ಬರೇಲಿ: ಸಾಮಾನ್ಯ ಜನರ ಸೇವೆ ಮಾಡಬೇಕೆಂಬ ‘ರಾಜ ಧರ್ಮ’ವನ್ನು ಬಿಜೆಪಿ ಮರೆತಿದೆ. ಕೇವಲ ದೊಡ್ಡ ಉದ್ಯಮಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ರಾಯ್‌ಬರೇಲಿಯ ಜಗತ್‌ಪುರದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಗಳನ್ನು ಪಡೆಯುವುದಕ್ಕಾಗಿ ಧರ್ಮ ಮತ್ತು ಜಾತಿಯನ್ನು ಬಳಸುವವರನ್ನು ಜನರು ಗಮನಿಸಬೇಕು ಎಂದರು.

ಬಿಜೆಪಿ ನಾಯಕರು ಜನರ ಸೇವೆ ಮಾಡುವುದು ತಮ್ಮ ಧರ್ಮ ಎಂಬುದನ್ನು ಮರೆತಿದ್ದಾರೆ. ಅವರಿಗೆ ಧರ್ಮ ಎಂಬುದು ಮತ ಗಳಿಕೆಗಾಗಿ ಜನರನ್ನು ಪ್ರಚೋದಿಸುವ ತಂತ್ರವಾಗಿಬಿಟ್ಟಿದೆ. ಬಿಜೆಪಿ ಸರ್ಕಾರವು ಜನರ ಸೇವೆ ಮಾಡಬೇಕೆಂಬ ರಾಜ ಧರ್ಮವನ್ನು ಮರೆತಿದೆ ಎಂದು ಅವರು ಟೀಕಿಸಿದ್ದಾರೆ.

ನಿರುದ್ಯೋಗ, ಹಣದುಬ್ಬರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಅಡುಗೆ ಅನಿಲದ ಸಿಲಿಂಡರ್ ಮತ್ತು ಸಾಸಿವೆ ಎಣ್ಣೆ ಬೆಲೆ ಏರಿಕೆ ಬಗ್ಗೆಯೂ ಉಲ್ಲೇಖಿಸಿದ್ದಾರೆ.

‘ನೀವು ದಿನಕ್ಕೆ ₹200 ಸಂಪಾದಿಸಿದರೆ ಒಂದು ಬಾಟಲ್ ಸಾಸಿವೆ ಎಣ್ಣೆಗೆ ₹240 ನೀಡಬೇಕಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.