ADVERTISEMENT

ವಿಧಾನಸಭೆ ಚುನಾವಣೆ: ರಾಜ್ಯ ಉಸ್ತುವಾರಿಗಳ ಬದಲಾವಣೆ ಮಾಡಿದ ಬಿಜೆಪಿ 

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 1:56 IST
Last Updated 14 ನವೆಂಬರ್ 2020, 1:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡಿರುವ ಬಿಜೆಪಿ ರಾಜ್ಯಗಳ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ಬದಲಾವಣೆ ನೇಮಕ ಮಾಡಿ ಆದೇಶ ಹೊರಡಿಸಿದೆ

ಪಕ್ಷದ ಸಂಘಟನಾ ಮುಖ್ಯಸ್ಥರ ಹುದ್ದೆಗಳನ್ನು ಇತ್ತೀಚೆಗಷ್ಟೇ ಬದಲಿಸಿದ್ದ ಬಿಜೆಪಿ ಇದೀಗ ರಾಜ್ಯಗಳ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ಬದಲಾವಣೆ

ಪಕ್ಷದ ಹಿರಿಯ ಮುಖಂಡ ಅರುಣ ಸಿಂಗ್‌ ಅವರಿಗೆ ಕರ್ನಾಟಕದ ಜವಾಬ್ದಾರಿ ವಹಿಸಲಾಗಿದ್ದು, ಡಿ.ಕೆ. ಅರುಣಾ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ADVERTISEMENT

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೇ ನೇಮಕಗೊಂಡು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪಕ್ಷದ ರಾಜ್ಯ ಮುಖಂಡ ಸಿ.ಟಿ. ರವಿ ಅವರಿಗೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ.

ರಾಜ್ಯದ ಇನ್ನೊಬ್ಬ ಮುಖಂಡ ನಿರ್ಮಲಕುಮಾರ್‌ ಸುರಾನಾ ಅವರನ್ನು ನೆರೆಯ ಪುದುಚೇರಿಗೆ ನಿಯೋಜಿಸಲಾಗಿದೆ. ಇದುವರೆಗೆ ರಾಜ್ಯದ ಉಸ್ತುವಾರಿಯಾಗಿದ್ದ ಪಿ.ಮುರುಳೀಧರ ರಾವ್‌ ಅವರಿಗೆ ಮಧ್ಯಪ್ರದೇಶದ ಹೊಣೆ ವಹಿಸಲಾಗಿದೆ.

ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರನ್ನು ಪಶ್ಚಿಮ ಬಂಗಾಳದ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇವರು ಕೈಲಾಶ್ ವಿಜಯವರ್ಗೀಯ ಅವರಿಗೆ ನೆರವಾಗಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಬದಲಾವಣೆ ಮಾಡಲಾಗಿದೆ.

ಸಂಬಿತ್ ಪಾತ್ರಾ ಅವರಿಗೆ ಮಣಿಪುರದ ಉಸ್ತುವಾರಿ ನೀಡಲಾಗಿದೆ. ಬೈಜಯಂತ್‌ ಪಾಂಡಾ ಅವರಿಗೆ ಅಸ್ಸಾಂ ಉಸ್ತುವಾರಿ ನೀಡಲಾಗಿದೆ.

ಸತ್ಯಕುಮಾರ್, ಸುನೀಲ್‌ ಓಜಾ, ಸಂಜೀವ್‌ ಚೌರಾಸಿಯಾ ಅವರನ್ನು ಉತ್ತರಪ್ರದೇಶದ ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಡಿ.ಪುರಂದರೇಶ್ವರಿ ಅವರು ಒಡಿಶಾ ಹಾಗೂ ಛತ್ತೀಸ್‌ಗಢದ ಉಸ್ತುವಾರಿಯನ್ನು ನೋಡಿಕೊಳ್ಳಲ್ಲಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಅವರಿಗೆ ಪಂಜಾಬ್, ಚಂಡೀಗಢದ ಹೋನೆ ನೀಡಲಾಗಿದೆ. ದಿಲೀಪ್ ಸಾಕಿಯಾ ಅವರು ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.