ADVERTISEMENT

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಖರ್ಚು ಮಾಡಿದ್ದು ₹ 1,737.68 ಕೋಟಿ!

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 10:55 IST
Last Updated 31 ಜನವರಿ 2025, 10:55 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ₹ 1,737.68 ಕೋಟಿ ಖರ್ಚು ಮಾಡಿದೆ. ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಸಿದ ಮಾಹಿತಿಯಿಂದ ಇದು ಗೊತ್ತಾಗಿದೆ.

ಈ ಪೈಕಿ ₹ 884.45 ಕೋಟಿ ಪಕ್ಷದ ಪ್ರಚಾರಕ್ಕೆ ಖರ್ಚು ಮಾಡಿದರೆ, ₹ 853.23 ಕೋಟಿ ಅಭ್ಯರ್ಥಿಗಳ ಖರ್ಚಿಗೆ ನೀಡಲಾಗಿದೆ.

ADVERTISEMENT

ಪತ್ರಿಕೆ, ಟಿ.ವಿ., ಎಸ್‌ಎಂಎಸ್‌ ಅಭಿಯಾನ, ಕೇಬಲ್, ವೆಬ್‌ಸೈಟ್‌ಗಳಲ್ಲಿ ಪ್ರಚಾರಕ್ಕೆ ₹ 611.50 ಕೋಟಿ ಖರ್ಚು ಮಾಡಿದೆ. ₹ 55. 75 ಕೋಟಿಯನ್ನು ಪೋಸ್ಟರ್‌, ಬ್ಯಾನರ್‌, ಹೋರ್ಡಿಂಗ್ಸ್‌, ಬಾವುಟ ಹಾಗೂ ಇತರೆ ಪ್ರಚಾರಕ್ಕೆ ವ್ಯಯಿಸಿದೆ.

ವೇದಿಕೆ ನಿರ್ಮಾಣ, ಧ್ವನಿವರ್ಧಕ, ಬ್ಯಾರಿಕೇಡ್, ವಾಹನ ಸೇರಿದಂತೆ ಸಾರ್ವಜನಿಕ ಸಮಾರಂಭದ ಖರ್ಚಿನ ಬಾಬ್ತು ₹ 19.84 ಕೋಟಿ.

ಸ್ಟಾರ್ ಪ್ರಚಾರಕರ ಪ್ರಯಾಣಕ್ಕೆ ₹ 168.92 ಕೋಟಿ ಖರ್ಚಾದರೆ, ಪಕ್ಷದ ಇತರ ನಾಯಕರ ಪ್ರಯಾಣಕ್ಕೆ ₹ 2.53 ವ್ಯಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.