ADVERTISEMENT

ಬಿಜೆಪಿಯ ರಾಹುಲ್ ನಾರ್ವೇಕರ್ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್‌

ಪಿಟಿಐ
Published 9 ಡಿಸೆಂಬರ್ 2024, 6:29 IST
Last Updated 9 ಡಿಸೆಂಬರ್ 2024, 6:29 IST
<div class="paragraphs"><p>ರಾಹುಲ್ ನಾರ್ವೇಕರ್</p></div>

ರಾಹುಲ್ ನಾರ್ವೇಕರ್

   

ಮುಂಬೈ:  ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್ ಅವರನ್ನು ಮಹಾರಾಷ್ಟ್ರದ 15ನೇ ವಿಧಾನಸಭೆಯ ಸ್ಪೀಕರ್ ಆಗಿ ಸೋಮವಾರ ಅವಿರೋಧವಾಗಿ ಚುನಾಯಿಸಲಾಯಿತು.

ನಾರ್ವೇಕರ್ ಅವರು ಭಾನುವಾರ ನಾಮಪತ್ರ ಸಲ್ಲಿಸಿದ್ದರು.

ADVERTISEMENT

ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಆಘಾಡಿಯು (ಎಂವಿಎ) ತನ್ನ ಸದಸ್ಯರನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದರಿಂದ ನಾರ್ವೇಕರ್‌ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ವಿಧಾನಸಭೆಯಲ್ಲೂ ನಾರ್ವೇಕರ್‌ ಅವರು ಎರಡೂವರೆ ವರ್ಷ ಸ್ಪೀಕರ್ ಆಗಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೋಲಬಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ತಮ್ಮ ಅಭಿನಂದನಾ ಭಾಷಣದಲ್ಲಿ ‘1960ರಲ್ಲಿ ರಾಜ್ಯವು ರಚನೆಯಾದಾಗಿನಿಂದ ಕೆಳಮನೆಯ ಸ್ಪೀಕರ್‌ ಹುದ್ದೆಗೆ ಎರಡನೇ ಬಾರಿಗೆ ಆಯ್ಕೆಯಾದ ಎರಡನೇ ವ್ಯಕ್ತಿ  ನಾರ್ವೇಕರ್‌. ಇದಕ್ಕೂ ಮುನ್ನ ಬಾಲಾಸಾಹೇಬ್‌ ಭಾರ್ದೆ ಅವರು ಸ್ಪೀಕರ್‌ ಹುದ್ದೆಗೆ ಎರಡು ಬಾರಿ ಆಯ್ಕೆಯಾಗಿದ್ದರು’ ಎಂದು ಹೇಳಿದರು.

ಈ ಹಿಂದೆ ನಾರ್ವೇಕರ್‌ ಅವರು ಸ್ಪೀಕರ್‌ ಆಗಿದ್ದ ಸಮಯದಲ್ಲಿ ನೈಜ ಪಕ್ಷಗಳನ್ನು ಗುರುತಿಸುವ ವಿಚಾರದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ‘ಅಗ್ನಿಪರೀಕ್ಷೆ’ಗಳನ್ನು ಎದುರಿಸಿದ್ದರು. ಸದನದಲ್ಲಿ ನಡೆದ ಹಲವು ಚರ್ಚೆಗಳಲ್ಲಿ ಅವರ ಕಾನೂನು ಪಾಂಡಿತ್ಯವು ಸಾಬೀತಾಗಿತ್ತು ಎಂದು ಪ್ರಶಂಸಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.