ADVERTISEMENT

ದೆಹಲಿ | ಡ್ರೋನ್‌ ಮೂಲಕ ರಕ್ತ ರವಾನೆ ಪ್ರಯೋಗ ಯಶಸ್ವಿ

ಪಿಟಿಐ
Published 11 ಮೇ 2023, 11:35 IST
Last Updated 11 ಮೇ 2023, 11:35 IST
(twitter/@MoHFW_INDIA)
(twitter/@MoHFW_INDIA)   

ನವದೆಹಲಿ: ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳನ್ನು ಕೈಗೊಂಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌), ಡ್ರೋನ್‌ ಮೂಲಕ ರಕ್ತ ರವಾನೆ ಮಾಡುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ.

ಗುರುವಾರ ’ಐ–ಡ್ರೋನ್‌‘ ಮೂಲಕ ರಕ್ತ ರವಾನೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಕೋವಿಡ್‌ ಸಂಕಷ್ಟ ಕಾಲದಲ್ಲಿ ಐ–ಡ್ರೋನ್‌ ಮೂಲಕ ದೂರದ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನೂ ರವಾನಿಸಲಾಗಿತ್ತು.

’10 ಯುನಿಟ್ ರಕ್ತದ ಮಾದರಿಯನ್ನು ಹೊತ್ತ ಐ–ಡ್ರೋನ್‌ ನೋಯ್ಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ನವದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ರಕ್ತವನ್ನು ರವಾನಿಸಿದೆ. ಡ್ರೋನ್‌ ಮೂಲಕ ರಕ್ತ ರವಾನೆ ಮಾಡಿರುವ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಸಂತಸವಾಗಿದೆ. ರಕ್ತವನ್ನು ಕಡಿಮೆ ತಾಪಮಾನದಲ್ಲೇ ನಿರ್ದಿಷ್ಟ ಸ್ಥಳಕ್ಕೆ ರವಾನಿಸುವುದು ಸಾಧ್ಯವಾಗಿದೆ. ಆಂಬುಲೆನ್ಸ್‌ ಮೂಲಕವೂ ಅದೇ ಸ್ಥಳಕ್ಕೆ ರಕ್ತ ರವಾನಿಸಲಾಗುತ್ತದೆ. ಡ್ರೋನ್‌ ಮೂಲಕ ರವಾನೆಯಾದ ರಕ್ತದ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಸಾಬೀತಾದರೆ ದೇಶದಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು‘ ಎಂದು ಐಸಿಎಂಆರ್‌ ಮಹಾನಿರ್ದೇಶಕ ಡಾ.ರಾಜೀವ್ ಬಾಹ್ಲ್‌ ತಿಳಿಸಿದರು.

ADVERTISEMENT

ಹಲವಾರು ದೇಶಗಳಲ್ಲಿ ಈಗಾಗಲೇ ಡ್ರೋನ್‌ ಮೂಲಕ ರಕ್ತ ರವಾನಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.