ADVERTISEMENT

ಬೈಕ್‌ಗೆ BMW ಕಾರು ಡಿಕ್ಕಿ: ಕೇಂದ್ರ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ ಸಾವು

ಪಿಟಿಐ
Published 15 ಸೆಪ್ಟೆಂಬರ್ 2025, 9:53 IST
Last Updated 15 ಸೆಪ್ಟೆಂಬರ್ 2025, 9:53 IST
<div class="paragraphs"><p>ಪತ್ನಿಯೊಂದಿಗೆ&nbsp;ನವಜೋತ್ ಸಿಂಗ್</p></div>

ಪತ್ನಿಯೊಂದಿಗೆ ನವಜೋತ್ ಸಿಂಗ್

   

ನವದೆಹಲಿ: ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಚಲಾಯಿಸುತ್ತಿದ್ದ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿತ್ತು.

ಘಟನೆಗೆ ಸಂಬಂಧಿಸಿದಂತೆ ಐಷಾರಾಮಿ ಕಾರು ಚಲಾಯಿಸುತ್ತಿದ್ದ ಗಗನಪ್ರೀತ್ ಎಂಬ ಮಹಿಳೆಯನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಮೃತ ಅಧಿಕಾರಿಯನ್ನು ಕೇಂದ್ರ ಹಣಕಾಸು ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಎಂದು ಗುರುತಿಸಲಾಗಿದೆ.

ಹರಿ ನಗರದ ನವಜೋತ್ ಸಿಂಗ್ ಅವರು ಭಾನುವಾರ ಬೆಳಿಗ್ಗೆ ಪತ್ನಿಯೊಂದಿಗೆ ಸಮೀಪದ ಬಂಗ್ಲಾ ಸಾಹೇಬ್ ಗುರುದ್ವಾರಕ್ಕೆ ತೆರಳಿ ಬೈಕ್‌ನಲ್ಲಿ ವಾಪಸ್ ಬರುವಾಗ ದೆಹಲಿ ಕಂಟೋನ್ಮೆಂಟ್ ಮೆಟ್ರೊ ರೈಲು ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿತ್ತು.

ಬಿಎಂಡಬ್ಲೂ ಕಾರು ನವಜೋತ್ ಸಿಂಗ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸಿಂಗ್ ಅವರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಂಬುಲೆನ್ಸ್ ಬರುವುದು ತಡವಾಗಿದ್ದರಿಂದ ಅಪಘಾತ ಮಾಡಿದ್ದವರೇ ತಮ್ಮದೇ ಕಾರಿನಲ್ಲಿ ನವಜೋತ್ ಸಿಂಗ್ ಅವರನ್ನು ದೂರದ ನ್ಯೂಲೈಫ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಗನಪ್ರೀತ್ ಹಾಗೂ ಅವರ ಪತಿ ಮತ್ತು ನವಜೋತ್ ಸಿಂಗ್ ಪತ್ನಿಯೂ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಹರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.