ಸಾಂದರ್ಭಿಕ ಚಿತ್ರ
ಎ.ಐ ಚಿತ್ರ
ಬಾಲ್ವೇಶ್ವರ: ಬೆಂಗಳೂರಿನಲ್ಲಿ ಮೃತಪಟ್ಟ ಒಡಿಶಾದ ವ್ಯಕ್ತಿಯ ಶವಪೆಟ್ಟಿಗೆ ಮೇಲೆ ತಪ್ಪಾದ ಚೀಟಿ ಅಂಟಿಸಿದ್ದರಿಂದ, ಬೇರೊಬ್ಬ ವ್ಯಕ್ತಿಯ ಮೃತದೇಹ ಸ್ವೀಕರಿಸಿದ್ದೇವೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಕೇಶ್ ಶಾ (21) ಆಗಸ್ಟ್ 15 ರಂದು ವಿದ್ಯುತ್ ಅವಘಢದಿಂದ ಮೃತಪಟ್ಟಿದ್ದರು. ಪಶ್ಚಿಮ ಬಂಗಾಳದ ಸಿಲಿಗುರಿ ಮೂಲಕದ ಮತ್ತೊಬ್ಬ ವ್ಯಕ್ತಿಯ ಮೃತದೇಹದೊಂದಿಗೆ ರಾಕೇಶ್ ಅವರ ಮೃತದೇಹವನ್ನೂ ಒಂದೇ ಆ್ಯಂಬ್ಯುಲೆನ್ಸ್‌ನಲ್ಲಿ ಸಾಗಿಸಲಾಗಿತ್ತು.
ರಾಕೇಶ್ ಅವರ ಮೃತದೇಹವೆಂದು ಗುರುತು ಮಾಡಲಾಗಿದ್ದ ಶವಪೆಟ್ಟಿಗೆಯನ್ನು ಮುಲಿಸಿಂಗ್ ಗ್ರಾಮದಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಆ್ಯಂಬುಲೆನ್ಸ್ ಭಾನುವಾರ ಸಿಲಿಗುರಿಗೆ ತೆರಳಿದೆ. ಆದರೆ ಶವಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿರುವ ಮೃತದೇಹವು ರಾಕೇಶ್ ಅವರದ್ದಲ್ಲ ಎಂದು ಗೊತ್ತಾಗಿದೆ.
ಕೂಡಲೇ, ಶವಪೆಟ್ಟಿಗೆಯನ್ನು ರವಾನಿಸಲು ವ್ಯವಸ್ಥೆ ಮಾಡಿದ ಕಂಪನಿಯನ್ನು ಸಂಪರ್ಕಿಸಿ, ಸಿಲಿಗುರಿಗೆ ತೆರಳುತ್ತಿದ್ದ ಆ್ಯಂಬುಲೆನ್ಸ್ ಅನ್ನು ಹಿಂದೆ ಕರೆಸಲಾಯಿತು.
ಡಿಸ್‌ಚಾರ್ಜ್ ಪಾಯಿಂಟ್‌ನಲ್ಲಿ ತಪ್ಪು ಚೀಟಿಗಳನ್ನು ಅಂಟಿಸಿದ್ದರಿಂದ ಈ ಅವ್ಯವಸ್ಥೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.