ಜೈಪುರ: ರಾಜಸ್ಥಾನದಲ್ಲಿ ಎರಡು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆಗಳ ಕಾರಣ ಆ ಹೋಟೆಲ್‌ಗಳಲ್ಲಿ ತಂಗಿದ್ದ ಜನರನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಹಾಲಿಡೇ ಇನ್’ ಹೋಟೆಲ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ಇ–ಮೇಲ್ ಸಂದೇಶ ಬಂದಾಗ ರಾಜಸ್ಥಾನದ ಗೃಹ ಸಚಿವ ಜವಾಹರ್ ಸಿಂಗ್ ಬೇಢಮ್, ಕೌಶಲ–ಸಿಬ್ಬಂದಿ–ಉದ್ಯಮ ಸಚಿವ ಕೆ.ಕೆ. ವೈಷ್ಣೋಯ್ ಮತ್ತು ಸಹಕಾರ ಸಚಿವ ಗೌತಮ್ ದಕ್ ಅವರು ಇದೇ ಹೋಟೆಲ್‌ನಲ್ಲಿ ತಂಗಿದ್ದರು. ಸಚಿವ ಬೇಢಮ್ ಅವರಿಗೆ ಬಾಂಬ್ ಇಡಲಾಗಿದೆ ಎಂಬ ಮಾಹಿತಿ ನೀಡಲಾಯಿತು. ಅವರು ಹೋಟೆಲ್‌ನಲ್ಲಿ ತಂಗಿದ್ದವರೆಲ್ಲರನ್ನೂ ತಾವಿರುವ ಕೊಠಡಿ ಬಿಟ್ಟು ತೆರಳುವಂತೆ ಮನವಿ ಮಾಡಿದರು. ಜೊತೆಗೆ ಸಚಿವರೂ ಹೋಟೆಲ್ ಕೊಠಡಿ ಖಾಲಿ ಮಾಡಿದರು.
ಆದರೆ, ಆ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ.
ಅದೇ ರೀತಿ, ದೆಹಲಿ ರಸ್ತೆಯಲ್ಲಿರುವ ‘ರಾಫ್ಲೆಸ್ ಹೋಟೆಲ್’ನಲ್ಲಿಯೂ ಬಾಂಬ್ ಇದೆ ಎಂಬ ಬೆದರಿಕೆ ಬಂದಿತ್ತು. ಹೀಗಾಗಿ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಭಯೋತ್ಪಾದನೆ ನಿಗ್ರಹ (ಎಟಿಎಸ್) ದಳದ ಸಿಬ್ಬಂದಿ ಬಾಂಬ್ ಶೋಧ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.