ADVERTISEMENT

ಸಿಎಎ ವಿರುದ್ಧ ಪ್ರತಿಭಟನೆ: ಎಎಂಯು ವಿದ್ಯಾರ್ಥಿಗೆ 6 ತಿಂಗಳು ನಿಷೇಧ

ವಿದ್ಯಾರ್ಥಿ ವಿರುದ್ಧ 2 ತಿಂಗಳ ಅವಧಿಯಲ್ಲಿ 12ಕ್ಕೂ ಹೆಚ್ಚು ಪ್ರಕರಣ ದಾಖಲು

ಪಿಟಿಐ
Published 30 ಜನವರಿ 2021, 14:49 IST
Last Updated 30 ಜನವರಿ 2021, 14:49 IST
ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ –ಪಿಟಿಐ ಚಿತ್ರ
ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ –ಪಿಟಿಐ ಚಿತ್ರ   

ಅಲೀಗಡ: ನಗರದಲ್ಲಿ ಶಾಂತಿ ಕದಡುವ ಭೀತಿಯ ಕಾರಣಕ್ಕಾಗಿ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಆರಿಫ್ ಖಾನ್ ತ್ಯಾಗ್ ಅವರಿಗೆ ಗೂಂಡಾ ಕಾಯ್ದೆಯಡಿ ಆರು ತಿಂಗಳ ಕಾಲ ಜಿಲ್ಲೆಯಿಂದ ನಿಷೇಧಿಸಲಾಗಿದೆ.

ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಸಿಎಎ ವಿರೋಧ ಪ್ರತಿಭಟನೆ ಸಂದರ್ಭದಲ್ಲಿ ಆರಿಫ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ವಿಶ್ವವಿದ್ಯಾಲಯದ ವಕ್ತಾರ ಪ್ರೊ.ಶಫೇ ಕಿದ್ವಾಯಿ ತಿಳಿಸಿದ್ದಾರೆ.

‘ನಗರದಲ್ಲಿ ಶಾಂತಿ ಕದಡುವ ಭೀತಿ ಇರುವುದರಿಂದ ಅಂತಿಮ ಸ್ನಾತಕೋತ್ತರ ಪದವಿ ಓದುತ್ತಿರುವ ಆರಿಫ್ ಖಾನ್ ಅವರಿಗೆ 6 ತಿಂಗಳ ಕಾಲ ಜಿಲ್ಲಾ ಪ್ರವೇಶಕ್ಕೆ ಗೂಂಡಾ ಕಾಯ್ದೆ ಅಡಿ ನಿಷೇಧಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ನಗರ) ರಾಕೇಶ್ ಕುಮಾರ್ ಮಾಲ್ಪಾನಿ ಆದೇಶ ನೀಡಿದ್ದಾರೆ. ಈ ಆದೇಶ ಎರಡು ದಿನಗಳ ಹಿಂದೆಯೇ ಆರಿಫ್ ಖಾನ್‌ಗೆ ತಲುಪಿದೆ.

ADVERTISEMENT

ಆರಿಫ್ ಪ್ರತಿಕ್ರಿಯೆ: ಆದೇಶಕ್ಕೆ ಪ್ರತಿಕ್ರಿಯಿಸಿರುವ ಆರಿಫ್ ‘ರೈತರು, ವಿದ್ಯಾರ್ಥಿಗಳು, ಹೋರಾಟಗಾರರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ನನ್ನ ವಿರುದ್ಧ ಹೊರಡಿಸಿರುವ ಆದೇಶ ಕುರಿತು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.