ADVERTISEMENT

ಗಡಿ ವಿವಾದ: 382 ಬಸ್‌ಗಳ ಸೇವೆ ಸ್ಥಗಿತಗೊಳಿಸಿದ ಮಹಾರಾಷ್ಟ್ರ

ಪಿಟಿಐ
Published 7 ಡಿಸೆಂಬರ್ 2022, 16:12 IST
Last Updated 7 ಡಿಸೆಂಬರ್ 2022, 16:12 IST

ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ತಾರಕಕ್ಕೇರಿರುವ ಕಾರಣ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮವು (ಎಂಎಸ್‌ಆರ್‌ಟಿಸಿ), ಕರ್ನಾಟಕಕ್ಕೆ ಸಂಚರಿಸುವ ತನ್ನ 1,156 ಬಸ್‌ಗಳ ಪೈಕಿ 382 ಬಸ್‌ಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಗಡಿ ಭಾಗದ ಜಿಲ್ಲಾಡಳಿತಗಳು ಮತ್ತು ಸ್ಥಳೀಯ ಪೊಲೀಸರು ನೀಡಿದ ಸೂಚನೆಗಳನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನಿಗಮದ ಪ್ರಕಟಣೆ ತಿಳಿಸಿದೆ.

ಮಹಾರಾಷ್ಟ್ರದ ನಾಂದೆಡ್‌, ಉಸ್ಮಾನಾಬಾದ್‌, ಸೋಲಾಪುರ, ಸಾಂಗ್ಲಿ, ಕೊಲ್ಹಾಪುರ ಮತ್ತು ಸಿಂಧೂದುರ್ಗ ಜಿಲ್ಲೆಗಳಿಂದ ಕರ್ನಾಟಕಕ್ಕೆ ಬಸ್‌ ಸೇವೆಯನ್ನು ಎಂಎಸ್‌ಆರ್‌ಟಿಸಿ ಒದಗಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.