ADVERTISEMENT

ಬ್ರಹ್ಮೋಸ್ ಕ್ಷಿಪಣಿಗೆ 15 ದೇಶಗಳಿಂದ ಬೇಡಿಕೆ: ರಾಜನಾ‌ಥ್ ಸಿಂಗ್

ಪಿಟಿಐ
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
ರಕ್ಷಣಾ ಸಚಿವ ರಾಜನಾಥ್ ಸಿಂಗ್ – ಪಿಟಿಐ ಚಿತ್ರ
ರಕ್ಷಣಾ ಸಚಿವ ರಾಜನಾಥ್ ಸಿಂಗ್ – ಪಿಟಿಐ ಚಿತ್ರ   

ಲಖನೌ: ಬ್ರಹ್ಮೋಸ್ ಕ್ಷಿಪಣಿಯು ಆಪರೇಷನ್‌ ಸಿಂಧೂರದಲ್ಲಿ ನಿರ್ಣಾಯಕ ಪಾತ್ರವಹಿಸಿದೆ ಎಂದು ರಕ್ಷಣಾ ಸಚಿವ ಭಾನುವಾರ ಹೇಳಿದರು.

ಈ ಕಾರ್ಯಾಚರಣೆ ಬಳಿಕ 14 ರಿಂದ 15 ದೇಶಗಳು ಬ್ರಹ್ಮೋಸ್‌ ಕ್ಷಿಪಣಿಗಾಗಿ ಬೇಡಿಕೆ ಇರಿಸಿವೆ ಎಂದು ತಿಳಿಸಿದ್ದಾರೆ.

‘ಕೆಲವು ದಿನಗಳ ಹಿಂದೆ ಬ್ರಹ್ಮೋಸ್ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಈಗ ಲಖನೌನಿಂದಲೂ ರಫ್ತು ಮಾಡಲಾಗುವುದು. ಇದು ನಮ್ಮ ದೇಶವನ್ನು ರಕ್ಷಣಾ ವಲಯದಲ್ಲೂ ಸ್ವಾವಲಂಬಿಯಾಗಿ ಮಾಡುತ್ತದೆ ಮತ್ತು ಉದ್ಯೋಗ ಸಹ ಸೃಷ್ಟಿ ಮಾಡುತ್ತದೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ADVERTISEMENT

ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ಮತ್ತು ಮೂಲಸೌಕರ್ಯಗಳಿಂದಾಗಿ ಉತ್ತರ ಪ್ರದೇಶವು ಹೆಚ್ಚು ಹೆಚ್ಚು ಕೈಗಾರಿಕೆಗಳನ್ನು ಆಕರ್ಷಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘ಮೂಲಸೌಕರ್ಯದಲ್ಲಿ ಐತಿಹಾಸಿಕ ಬದಲಾವಣೆ ಆಗುತ್ತಿವೆ. ಎಕ್ಸ್‌ಪ್ರೆಸ್ ವೇ, ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ಇವೆಲ್ಲವೂ ಅಭಿವೃದ್ಧಿಯ ಹೊಸ ಚಿತ್ರಣವನ್ನು ನಿರೂಪಿಸುತ್ತವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.