ADVERTISEMENT

ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಕುನಾಲ್, ಸುಷ್ಮಾ ವಿರುದ್ಧ ಹಕ್ಕುಚ್ಯುತಿ

ಪಿಟಿಐ
Published 26 ಮಾರ್ಚ್ 2025, 15:41 IST
Last Updated 26 ಮಾರ್ಚ್ 2025, 15:41 IST
ಕುನಾಲ್‌ ಕಾಮ್ರಾ
ಕುನಾಲ್‌ ಕಾಮ್ರಾ   

ಮುಂಬೈ: ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಮತ್ತು ಶಿವಸೇನಾ (ಯುಬಿಟಿ) ವಕ್ತಾರೆ ಸುಷ್ಮಾ ಅಂಧಾರೆ ಅವರಿಂದ ಹಕ್ಕುಚ್ಯುತಿ ಆಗಿದೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರವೀಣ್ ದರೇಕರ್ ಅವರು ನಿಲುವಳಿ ಸೂಚನೆ ಮಂಡಿಸಿದ್ದಾರೆ.

‘ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಗ್ಗೆ ವೈಯಕ್ತಿಕ ಹಾಗೂ ಅವಹೇಳನಕಾರಿ ಅಂಶಗಳಿರುವ ಹಾಡನ್ನು ಕುನಾಲ್ ಹಾಡಿದ್ದಾರೆ’ ಎಂದು ನಿಲುವಳಿ ಸೂಚನೆ ಮಂಡಿಸುವ ಸಂದರ್ಭದಲ್ಲಿ ಪ್ರವೀಣ್ ಅವರು ಹೇಳಿದ್ದಾರೆ.

‘ಸುಷ್ಮಾ ಅವರು ಕಾರ್ಯಕ್ರಮವನ್ನು ಬೆಂಬಲಿಸಿ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ, ಇದು ಸದನದ ನಿಂದನೆಗೆ ಸಮ’ ಎಂದು ಅವರು ಹೇಳಿದ್ದಾರೆ. ಕುನಾಲ್ ಮತ್ತು ಸುಷ್ಮಾ ಅವರು ತಮ್ಮ ಮಾತುಗಳ ಮೂಲಕ ಶಾಸನ ಸಭೆಗಳನ್ನು ಅಗೌರವದಿಂದ ಕಂಡಿದ್ದಾರೆ ಎಂದು ಪ್ರವೀಣ್ ಆರೋ‍ಪಿಸಿದ್ದಾರೆ.

ADVERTISEMENT

ಸುಷ್ಮಾ ಅವರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಅಣಕಿಸಿದ್ದಾರೆ ಎಂದು ದೂರಿ ಶಿವಸೇನಾ ಶಾಸಕ ರಮೇಶ್ ಬೋರ್ನಾರೆ ಅವರು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.