ADVERTISEMENT

ಜಮ್‌ಶೆಡ್‌ಪುರ: ಟಾಟಾ ಉಕ್ಕು ಕಾರ್ಖಾನೆಯಲ್ಲಿ ಸ್ಫೋಟ, ಮೂವರಿಗೆ ಗಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2022, 11:07 IST
Last Updated 7 ಮೇ 2022, 11:07 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಜಮ್‌ಶೆಡ್‌ಪುರ: ಇಲ್ಲಿನ ಟಾಟಾ ಉಕ್ಕು ಕಾರ್ಖಾನೆಯ ಘಟಕವೊಂದರ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಶನಿವಾರ ಮೂವರು ಗಾಯಗೊಂಡಿದ್ದಾರೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳಿಗ್ಗೆ 10.20ರ ವೇಳೆಗೆ ಸ್ಫೋಟ ಸಂಭವಿಸಿತ್ತು. ಗಾಯಗೊಂಡವರನ್ನು ‘ಟಾಟಾ ಮೇನ್ ಆಸ್ಪತ್ರೆ’ಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಕಲ್ಲಿದ್ದಲು ಘಟಕದ ಗ್ಯಾಸ್ ಪೈಪ್‌ಲೈನ್‌ನ ‘ಬ್ಯಾಟರಿ 6’ರಲ್ಲಿ ಬೆಳಿಗ್ಗೆ 10.20ಕ್ಕೆ ಸ್ಫೋಟದ ಸದ್ದು ಕೇಳಿಸಿತ್ತು. ಸದ್ಯ ಈ ಬ್ಯಾಟರಿ ಕಾರ್ಯನಿರ್ವಹಿಸುತ್ತಿ‌ಲ್ಲ. ಅದನ್ನು ತೆಗೆದುಹಾಕುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಇದಕ್ಕೂ ಮುನ್ನ, ‘ಜೆಮ್‌ಶೆಡ್‌ಪುರದ ಟಾಟಾ ಉಕ್ಕು ಕಾರ್ಖಾನೆಯ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಜಿಲ್ಲಾಡಳಿತವು ಟಾಟಾ ಉಕ್ಕು ಘಟಕದ ಆಡಳಿತದ ಜತೆಗೂಡಿ ತೆರವು ಕಾರ್ಯಾಚರಣೆ ಮತ್ತು ಗಾಯಾಳುಗಳ ತ್ವರಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳುತ್ತಿದೆ’ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮಾಡಿದ್ದರು.

‘ಬ್ಯಾಟರಿ ಸ್ಫೋಟದಿಂದಾಗಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಘಟಕದಲ್ಲಿ ಬೆಂಕಿ ಆವರಿಸಿದ್ದು, ಅಗ್ನಿಶಾಮಕ ದಳದ ಐದು ವಾಹನಗಳು ಸ್ಥಳಕ್ಕೆ ಧಾವಿಸಿವೆ. ಇಬ್ಬರು ಕಾರ್ಮಿಕರಿಗೆ ಗಾಯಗಳಾಗೊವೆ’ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.