ಗುಜರಾತ್‌ನ ವಡೋದರಾದಲ್ಲಿ ಕುಸಿದ ಗಂಭೀರ ಸೇತುವೆಯಿಂದ ನೀರು ಪಾಲಾದವರಿಗಾಗಿ ನಹಿಸಾಗರದಲ್ಲಿ ನಡೆದ ಶೋಧ ಕಾರ್ಯ
ರಾಯಿಟರ್ಸ್ ಚಿತ್ರ
ವಡೋದರಾ: ಒಂಬತ್ತು ಜನರ ಪ್ರಾಣ ಕಸಿದುಕೊಂಡ ಗುಜರಾತ್‌ನ ಸೇತುವೆ ದುರಂತದಲ್ಲಿ ನೀರು ಪಾಲಾದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ಗಂಭೀರ ಸೇತುವೆಯ 10ರಿಂದ 15 ಮೀಟರ್ ಉದ್ದದ ಸ್ಲಾಬ್ ಕುಸಿಯಿತು. ಸಹಜವಾಗಿ ಎಂದಿನಂತೆಯೇ ಸಾಗುತ್ತಿದ್ದ ವಾಹನಗಳು ಕುಸಿದ ಸೇತುವೆಯೊಂದಿಗೆ ಮಹಿಸಾಗರ ಸೇರಿದವು.
ಮಹಿಸಾಗರ ನದಿ ಹಾದು ಹೋಗುವ ಸೌರಾಷ್ಟ್ರ ಪ್ರಾಂತ್ಯವನ್ನು ಈ ಸೇತುವೆ ಬೆಸೆಯುತ್ತದೆ. ಪಾದ್ರಾ ಪಟ್ಟಣ ಬಳಿಯ ಈ ಸೇತುವೆಯನ್ನು 1985ರಲ್ಲಿ ನಿರ್ಮಿಸಲಾಗಿತ್ತು.
‘ಬಿದ್ದ ವಾಹನಗಳಲ್ಲಿ ಎರಡು ಟ್ರಕ್‌ಗಳು, ಎರಡು ವ್ಯಾನ್ ಮತ್ತು ಒಂದು ಆಟೊ ರಿಕ್ಷಾ ಸೇರಿದೆ. ದ್ವಿಚಕ್ರ ವಾಹನ ಒಂದು ಕುಸಿದು ಮೂವರು ನದಿಗೆ ಬಿದ್ದರು. ಇವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ಎರಡು ವಾಹನಗಳು ಬೀಳುವ ಹಂತದಲ್ಲಿದ್ದವು. ಆದರೆ ಚಾಲಕರು ಅವುಗಳನ್ನು ನಿಯಂತ್ರಿಸಿ ಸುರಕ್ಷಿತ ಸ್ಥಳಕ್ಕೆ ತಿರುಗಿಸುವಲ್ಲಿ ಸಫಲರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಅನಿಲ್ ಧಮೇಲಿಯಾ ತಿಳಿಸಿದ್ದಾರೆ.
ಘಟನೆಯಲ್ಲಿ ಮಗು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಆಘಾತ ವ್ಯಕ್ತಪಡಿಸಿದ್ದಾರೆ. ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಸೇತುವೆಯು ಒಟ್ಟು 900 ಮೀಟರ್ ಉದ್ದವಿದೆ. 23 ಪಿಲ್ಲರ್‌ಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.