ADVERTISEMENT

ಬಿಎಸ್‌ಎಫ್‌ನಲ್ಲಿ ಮತ್ತೊಂದು ದುರಂತ: ಸಹೋದ್ಯೋಗಿ ಕೊಂದು ಆತ್ಮಹತ್ಯೆಗೆ ಶರಣಾದ ಯೋಧ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 10:56 IST
Last Updated 7 ಮಾರ್ಚ್ 2022, 10:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿರುವ ಗಡಿ ಭದ್ರತಾ ಪಡೆಯ ಶಿಬಿರದಲ್ಲಿ ಸೋಮವಾರ ಯೋಧನೊಬ್ಬರು ಸಹೋದ್ಯೋಗಿಯನ್ನು ಕೊಂದು, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಂಜಾಬ್‌ನ ಅಟ್ಟಾರಿ–ವಾಘಾ ಗಡಿ ಬಳಿಯ ಸೇನಾ ಶಿಬಿರದಲ್ಲಿ ಭಾನುವಾರ ಇಂಥದ್ದೇ ಘಟನೆ ನಡೆದಿತ್ತು. ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧ, ಕರ್ನಾಟಕ ಮೂಲದ ಸತ್ತೆಪ್ಪ ಎಂಬುವರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ್ದ ಸತ್ತೆಪ್ಪ ಅವರೂ ಮೃತಪಟ್ಟಿದ್ದರು. ಈ ಘಟನೆ ದೇಶವನ್ನು ಬೆಚ್ಚಿಬೀಳಿಸಿರುವಾಗಲೇ ಅಂಥದ್ದೇ ಮತ್ತೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯ ಕಾವಲು ಹೊಣೆ ಹೊತ್ತಿರುವ ಬಿಎಸ್‌ಎಫ್‌ನ ಜಲಂಗಿ ಶಿಬಿರದಲ್ಲಿ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ.

ADVERTISEMENT

ಅಧಿಕಾರಿಗಳ ಪ್ರಕಾರ, ಇಬ್ಬರ ನಡುವೆ ಜಗಳ ನಡೆದು, ಕೊನೆಗೆ ಕೊಲೆ ನಡೆದಿದೆ ಎನ್ನಲಾಗಿದೆ.

ಒಬ್ಬ ಯೋಧ ಛತ್ತೀಸಗಢದವರಾಗಿದ್ದು ಮತ್ತೊಬ್ಬರು ತಮಿಳುನಾಡಿನವರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.