ADVERTISEMENT

ಜಮ್ಮು: ಐಬಿಯಲ್ಲಿ ಪಾಕ್‌ ಡ್ರೋನ್‌ ಹಾರಾಟ

​ಪ್ರಜಾವಾಣಿ ವಾರ್ತೆ
Published 7 ಮೇ 2022, 19:30 IST
Last Updated 7 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಇಲ್ಲಿನ ಅಂತರರಾಷ್ಟ್ರೀಯ ಗಡಿ(ಐಬಿ)ಯ ಅರ್ನಿಯ ಪ್ರದೇಶದಲ್ಲಿ ಶನಿವಾರ ಪಾಕಿಸ್ತಾನದ ಡ್ರೋನ್‌ವೊಂದು ಹಾರಾಟ ನಡೆಸಿದ್ದು, ಅದನ್ನು ಪತ್ತೆ ಹಚ್ಚಿದ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಹಲವು ಸುತ್ತು ಗುಂಡು ಹಾರಿಸಿದೆ.

‘ಡ್ರೋನ್ ಭಾರತದ ಗಡಿ ದಾಟಿದ ತಕ್ಷಣ ಎಚ್ಚೆತ್ತ ಬಿಎಸ್‌ಎಫ್‌ ಯೋಧರು ಅದನ್ನು ಹೊಡೆದುರುಳಿಸಲು ಸುಮಾರು ಎಂಟು ಸುತ್ತು ಗುಂಡು ಹಾರಿಸಿದರು. ಡ್ರೋನ್‌ನಿಂದ ಯಾವುದೇ ವಸ್ತುಗಳು ಕೆಳಗೆ ಬೀಳದಂತೆ ಬೃಹತ್‌ ಶೋಧ ಕಾರ್ಯಾಚರಣೆ ಆರಂಭಿಸಿದ ನಂತರ ಡ್ರೋನ್‌ ಪಾಕಿಸ್ತಾನದ ಕಡೆ ಮರಳಿತು’ ಎಂದು ಬಿಎಸ್‌ಎಫ್‌ನ ಜಮ್ಮು ಪ್ರಾಂತ್ಯ ಡಿಐಜಿ ಎಸ್‌.ಪಿ.ಸಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT