ADVERTISEMENT

ಪಾಕಿಸ್ತಾನ ಗಡಿಯಲ್ಲಿ ಶಂಕಿತ ಡ್ರೋನ್‌ನತ್ತ ಬಿಎಸ್‌ಎಫ್‌ನಿಂದ ಗುಂಡು

ಪಿಟಿಐ
Published 23 ಆಗಸ್ಟ್ 2021, 5:23 IST
Last Updated 23 ಆಗಸ್ಟ್ 2021, 5:23 IST
ಬಿಎಸ್‌ಎಫ್ ಲಾಂಛನ
ಬಿಎಸ್‌ಎಫ್ ಲಾಂಛನ   

ಜಮ್ಮು: ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಸೋಮವಾರ ಬೆಳಿಗ್ಗೆ ಭಾರತದತ್ತ ಬರುತ್ತಿದ್ದ ಶಂಕಿತ ಹಾರುವ ವಸ್ತುವೊಂದನ್ನು ಗುರುತಿಸಿದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿ ಅದರತ್ತ ಗುಂಡು ಹಾರಿಸಿದ್ದು, ಅದು ಪಾಕಿಸ್ತಾನದತ್ತ ವಾಪಸಾಗಿದೆ.

‘ಬೆಳಿಗ್ಗೆ 5.30ರ ಸುಮಾರಿಗೆ ಆಗಸದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಬೆಳಕಿನ ಮಿಣುಕುತ್ತಿರುವುದು ಕಾಣಿಸಿತು. ತಕ್ಷಣ ಬಿಎಸ್‌ಎಫ್‌ ಸಿಬ್ಬಂದಿ ಅದರತ್ತ ಗುಂಡು ಹಾರಿಸಿದರು. ಹಾರುವ ವಸ್ತು ಬಳಿಕ ಪಾಕಿಸ್ತಾನದತ್ತ ಹೋಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹಾರಿದ ವಸ್ತು ಡ್ರೋನ್ ಇರಬಹುದು ಎಂಬ ಶಂಕೆ ಇದ್ದು,ಪೊಲೀಸರ ನೆರವಿನಿಂದ ಸ್ಥಳವನ್ನು ಪರಿಶೀಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.