ADVERTISEMENT

‘ಬರ್ನಿಂಗ್ ರೋಸಸ್ ಇನ್ ಮೈ ಗಾರ್ಡನ್‌’ ತಸ್ಲೀಮಾ ಕವನ ಸಂಕಲನ ಇಂಗ್ಲಿಷಿಗೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 16:11 IST
Last Updated 15 ಸೆಪ್ಟೆಂಬರ್ 2023, 16:11 IST
ತಸ್ಲೀಮಾ ನಸ್ರೀನ್
ತಸ್ಲೀಮಾ ನಸ್ರೀನ್   

ನವದೆಹಲಿ (ಪಿಟಿಐ): ಲೇಖಕಿ ತಸ್ಲೀಮಾ ನಸ್ರೀನ್ ಅವರ ಸಮಗ್ರ ಕವನ ಸಂಕಲನ ‘ಬರ್ನಿಂಗ್ ರೋಸಸ್ ಇನ್ ಮೈ ಗಾರ್ಡನ್’ ಅನ್ನು ಬಾಂಗ್ಲಾದಿಂದ ಇಂಗ್ಲಿಷಿಗೆ ಜೆಸ್ಸಿ ವಾಟರ್ಸ್ ಅನುವಾದಿಸಿದ್ದಾರೆ ಎಂದು ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಪ್ರಕಾಶನ ಶುಕ್ರವಾರ ತಿಳಿಸಿದೆ.

ಕೃತಿಯಲ್ಲಿರುವ ಕವನಗಳು ಲೇಖಕಿಯ ಒಂಟಿತನ, ದುಃಖ ಮತ್ತು ಆನಂದಪರವಶತೆಯನ್ನು ಬಿಂಬಿಸುತ್ತವೆ ಎಂದೂ ಪ್ರಕಾಶನ ಹೇಳಿದೆ.

‘ಇಲ್ಲಿರುವ ಕವಿತೆಗಳು ನನ್ನ ಸ್ವಂತ ದುಃಖ, ಸಂತೋಷ, ಹತಾಶೆ ಮತ್ತು ಪ್ರೀತಿಯ ಸಂಕೇತಗಳಲ್ಲ. ಇವೆಲ್ಲವೂ ಜಗತ್ತಿನಾದ್ಯಂತ ಇರುವ ಲಕ್ಷಾಂತರ ಮಹಿಳೆಯರು ಪ್ರತಿಧ್ವನಿಸುವ ಸಾಮರಸ್ಯದ ಮೂಲಕ ಸ್ವಾತಂತ್ರ್ಯವನ್ನು ಕಂಡುಕೊಳ್ಳುವ ನನ್ನ ಹಾಡುಗಳು’ ಎಂದು ತಸ್ಲೀಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ADVERTISEMENT

‘ವಿಶ್ವದ ಅತ್ಯಂತ ಅರ್ಥಪೂರ್ಣವಾದ ಮಾನವತಾವಾದಿಯಾಗಿರುವ ಕವಿಯೊಬ್ಬರು ಬರೆದ ಕವನಗಳನ್ನು ಅನುವಾದಿಸಿರುವ ಬಗ್ಗೆ ನನಗೆ ಅಚ್ಚರಿಯ ಹೆಮ್ಮೆ ಇದೆ’ ಎಂದು ಅನುವಾದಕ ಜೆಸ್ಸಿ ವಾಟರ್ಸ್ ಹೇಳಿದ್ದಾರೆ. 

‘ಬರ್ನಿಂಗ್ ರೋಸಸ್ ಇನ್ ಮೈ ಗಾರ್ಡನ್’ ಸೆ. 25ರಿಂದ ಮಾರಾಟಕ್ಕೆ ಲಭ್ಯವಿದೆ.

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.