ನವದೆಹಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ.
ಮಹಾರಾಷ್ಟ್ರ, ಒಡಿಶಾ, ಹರಿಯಾಣ, ತೆಲಂಗಾಣ, ಉತ್ತರ ಪ್ರದೇಶದ ತಲಾ ಒಂದೊಂದು ಮತ್ತು ಬಿಹಾರದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.
ಉಮೇದುವಾರಿಕೆ ಸಲ್ಲಿಸಲು ಅಕ್ಟೋಬರ್ 14 ಕಡೇ ದಿನವಾಗಿದ್ದು, ಅ.17ರ ಒಳಗಾಗಿ ನಾಮಪತ್ರ ಹಿಂಪಡೆಯಬಹುದು ಎಂದು ಭಾರತೀಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಯಾವ ಕ್ಷೇತ್ರಗಳಿಗೆ ಚುನಾವಣೆ?
ಮಹಾರಾಷ್ಟ್ರ – ಅಂಧೇರಿ ಪೂರ್ವ
ಬಿಹಾರ– ಮೊಕಾಮ ಮತ್ತು ಗೋಪಿಗಂಜ್
ಹರಿಯಾಣ– ಅದಮ್‌ಪುರ
ತೆಲಂಗಾಣ – ಮುನಗೋಡೆ
ಉತ್ತರ ಪ್ರದೇಶ – ಗೋಲಾ ಗೋಕರ್ಣನಾಥ
ಒಡಿಶಾ – ಧಾಮನಗರ (ಎಸ್‌ಸಿ)
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.